Popular Posts

ದಾದಾ ಯಾರ್ ಗೊತ್ತಾ ಹಾಡಿಗೆ ಸ್ಟೆಪ್ ಹಾಕಿದ ಬಿಗ್ ಬಾಸ್ ಸೂರಜ್

ಬೆಂಗಳೂರು: ಚೆನ್ನೈಸ್ ಅಮಿತಾರ್ ಹೋಟೆಲ್ ಮ್ಯಾನೇಜ್ಮೆಂಟ್ ಅಂಡ್ ಏವಿಯೇಷನ್‌ ಕಾಲೇಜಿನಲ್ಲಿ ನಡೆದ ‘ಕಲಾಕೃತಿ 5.0’ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಖ್ಯಾತಿಯ ಸೂರಜ್ ಸಿಂಗ್ ಮುಖ್ಯ ಅತಿಥಿಯಾಗಿ‌ ಭಾಗವಹಿಸಿದ್ದರು.

ಸೂರಜ್ ಅವರ ತಾಯಿ‌ ಜೊತೆಗಿರೋ ಫೋಟೋ ಹಾಗೂ ಕಿಚ್ಚ ಸುದೀಪ್ ಜೊತೆಗಿನ ಫೋಟೋವನ್ನು ವಿದ್ಯಾರ್ಥಿಗಳು ವಾಟರ್ ಮೆಲನ್‌ ಕಾರ್ವಿಂಗ್ ಮಾಡಿದ್ದನ್ನು ಕಂಡು ಭಾವುಕರಾದ ಸೂರಜ್ ವಿದ್ಯಾರ್ಥಿಗಳ ಜತೆ ಕಿಚ್ಚ ಸುದೀಪ್ ಅಭಿನಯದ ‘ದಾದಾ ಯಾರ್ ಗೊತ್ತಾ’ ಹಾಡಿಗೆ ನೃತ್ಯ ಮಾಡಿದರು. ನಂತರ ಆ ವಿದ್ಯಾರ್ಥಿಗಳಿಗೆ ಕೊಡವ ನೃತ್ಯ ಹೇಳಿಕೊಟ್ಟ ಸೂರಜ್ ‘ಸಕ್ಸಸ್ ಅನ್ನೊದು ಸುಲಭಕ್ಕೆ ಸಿಗುವುದಲ್ಲ, ವೇದಿಕೆ ಯಾವುದೇ ಇದ್ದರೂ, ಅಲ್ಲಿ ನಿಮ್ಮ ಪರಿಶ್ರಮ‌ ಸದಾ ಇರಬೇಕು.‌ ನೀವು ಏನು ಮಾಡಬೇಕು ಅನ್ನೊದರ ಬಗ್ಗೆ ಮೊದಲು ನಿಮಗೆ ಕ್ಲಾರಿಟಿ ಇರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಿನ್ಸಿಪಾಲ್ ಹಾಗೂ ಫ್ರೋಫೆಸರ್ ಸ್ವಾಮಿನಾಥನ್ ಹಾಗೂ ರೀಜಿನಲ್ ಮ್ಯಾನೇಜರ್ ರಾಜೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *