1
1
ತಂದೆ-ಮಗನಾಗಿ ಮೋಹನ್ಲಾಲ್ – ಸಮರ್ಜಿತ್ ಲಂಕೇಶ್
ತರುಣ್ ಸುಧೀರ್ ಸಹೋದರ ನಂದಕಿಶೋರ್ ಆ್ಯಕ್ಷನ್-ಕಟ್ ಹೇಳಿರುವ ಚಿತ್ರ ವೃಷಭ. ಈ ಚಿತ್ರದಲ್ಲಿ ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್ ಮೋಹನ್ ಲಾಲ್ ಅವರ ಪುತ್ರನಾಗಿ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್ 25ರಂದು ವಿಶ್ವದಾದ್ಯಂತ ತೆರೆಗೆ ಬರಲಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಕೇರಳದ ಕೊಚ್ಚಿಯಲ್ಲಿ ಅದ್ದೂರಿಯಾಗಿ ನಡೆಯಿತು. ಈ ಸಮಾರಂಭದಲ್ಲಿ ಚಿತ್ರದ ನಾಯಕ ಮೋಹನ್ ಲಾಲ್, ಸಮರ್ಜಿತ್ ಲಂಕೇಶ್, ರಾಗಿಣಿ ದ್ವಿವೇದಿ ಮತ್ತು ನಯನ್ ಸಾರಿಕಾ ಹಾಗೂ ನಿರ್ದೇಶಕ ನಂದ ಕಿಶೋರ್ ಉಪಸ್ಥಿತರಿದ್ದರು. ನಿರ್ಮಾಪಕರಾದ ವರುಣ್ ಮಾಥುರ್, ಅಭಿಷೇಕ್ ಎಸ್. ವ್ಯಾಸ್ ಮತ್ತು ಸಂಜಯ್ ದ್ವಿವೇದಿ ಕೂಡ ಭಾಗಿಯಾಗಿದ್ದರು.

ಮಲಯಾಳಂ ನಟ ಮೋಹನ್ ಲಾಲ್ ಅಭಿನಯದ ವೃಷಭ ಚಿತ್ರವು ಪ್ರೀತಿ, ವಿಧಿ ಮತ್ತು ತ್ಯಾಗದ ಸುತ್ತ ನಡೆಯುವ ಕಥೆಯಾಗಿದೆ. ಈ ಚಿತ್ರದಲ್ಲಿ
ಮೋಹನ್ಲಾಲ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಫ್ಲಾಷ್ ಬ್ಯಾಕ್ ಕಥೆಯಲ್ಲಿ ರಾಜ ವಿಜಯೇಂದ್ರ ವೃಷಭನಾಗಿ, ಪ್ರಸ್ತುತ ದಿನಗಳಲ್ಲಿ ಯಶಸ್ವಿ ಉದ್ಯಮಿಯ ಪಾತ್ರ ನಿರ್ವಹಿಸಿದ್ದಾರೆ. ಸಮರ್ಜಿತ್ ಲಂಕೇಶ್ ತನ್ನ ತಂದೆಯನ್ನು ರಕ್ಷಿಸಲು ವಿಧಿ ಮತ್ತು ಭಯದೊಂದಿಗೆ ಹೇಗೆ ಹೋರಾಡುತ್ತಾರೆ ಎಂದು ಈ ಟ್ರೇಲರ್ ನೋಡಿದಾಗ ತಿಳಿಯಲಿದೆ. ಕನ್ನಡದ ರಾಗಿಣಿ ದ್ವಿವೇದಿ, ನಯನ್ ಸಾರಿಕಾ, ಅಜಯ, ಗರುಡ ರಾಮ್ ಈ ಚಿತ್ರದಲ್ಲಿದ್ದಾರೆ.

ನಿರ್ದೇಶಕ ನಂದ ಕಿಶೋರ್ ಮಾತನಾಡಿ, “ಇದು ಕಾಲಾನುಕ್ರಮದ ಹೃದಯಗಳನ್ನು ಸಂಪರ್ಕಿಸುವ ಕಥೆ. ಪ್ರೀತಿ, ವಿಧಿ ಮತ್ತು ತ್ಯಾಗದಿಂದ ಬಂಧಿತರಾದ ತಂದೆ ಮತ್ತು ಮಗನ ಪ್ರಬಲ ಸಾಹಸಗಾಥೆ. ಮೋಹನ್ ಲಾಲ್ ಅವರೊಂದಿಗೆ ಕೆಲಸ ಮಾಡಬೇಕೆನ್ನುವುದು ಪ್ರತಿಯೊಬ್ಬ ನಿರ್ದೇಶಕನ ಕನಸು. ಈ ಕಥೆಯನ್ನು ಜೀವಂತಗೊಳಿಸಲು ಶ್ರಮಿಸಿದ ತಂತ್ರಜ್ಞರ ತಂಡದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದರು.
ಕನೆಕ್ಟ್ ಮೀಡಿಯಾ ಮತ್ತು ಬಾಲಾಜಿ ಟೆಲಿ ಫಿಲಂಸ್, ಅಭಿಷೇಕ್ ಎಸ್. ವ್ಯಾಸ್ ಸ್ಟುಡಿಯೋಸ್ ಮೂಲಕ ವೃಷಭ ಚಿತ್ರವನ್ನು ಶೋಭಾ ಕಪೂರ್, ಏಕ್ತಾ ಕಪೂರ್, ಸಿ.ಕೆ.ಪದ್ಮಕುಮಾರ್, ವರುಣ್ ಮಾಥುರ್, ಸೌರಭ್ ಮಿಶ್ರಾ, ಅಭಿಷೇಕ್ ಎಸ್. ವ್ಯಾಸ್, ಪ್ರವೀರ್ಸಿಂಗ್, ವಿಶಾಲ್ ಗುರ್ನಾನಿ ಮತ್ತು ಜೂಹಿ ಪರೇಖ್ ಮೆಹ್ತಾ ಸೇರಿ ನಿರ್ಮಿಸಿದ್ದಾರೆ.