Popular Posts

“ಕೆಂಪು ಹಳದಿ ಹಸಿರು”ಅನುಮಾನದ ಸುತ್ತಹುಟ್ಟಿತೊಂದು ಹಾಸ್ಯ

ತಂದೆಯಿಂದ ದೂರಾದ ನಾಯಕ ಅರ್ಜುನ್ ತಾಯಿಯನ್ನು ಸಾಕಲು ಯಾಸ್ ಮಾರ್ಟ ಎಂಬ ಗ್ರಾಸರಿ ಷಾಪ್ ನಲ್ಲಿ ಡಿಲವರಿ ಬಾಯ್ ಕೆಲಸ ಮಾಡಿಕೊಂಡಿರುತ್ತಾನೆ. ಹಿರಿಯರೇ ತಪ್ಪು ಹಾದಿ ಹಿಡಿದಾಗ ಆ ಮಕ್ಕಳ ಭವಿಷ್ಯ ಏನಾಗಬಹುದು ಎಂಬುದನ್ನು ನಿರ್ದೇಶಕ ಮಣಿ.ಎ.ಜೆ. ಕಾರ್ತಿಕೇಯನ್ ಅವರು ತಮ್ಮ ಕೆಂಪು ಹಳದಿ ಹಸಿರು ಚಿತ್ರದ ಮೂಲಕ ಹೇಳಿದ್ದಾರೆ,

ನಾಯಕ ಅರ್ಜುನ್ (ಶ್ರೀಹನ್) ಗ್ರಾಸರಿ ಷಾಪ್ ಡಿಲವರಿ ಬಾಯ್. ಆತ ಒಬ್ಬ ಬ್ಯುಸಿನೆಸ್ ಮ್ಯಾನ್ ಮಗ ಆದರೂ ತಂದೆಯ ನಡವಳಿಕೆ ಹಿಡಿಸದೆ ಮನೆ ಬುಟ್ಟು ಬಂದು ಡಿಲೆವರಿ ಬಾಯ್ ಕೆಲಸ ಮಾಡಿಕೊಂಡಿರುತ್ತಾನೆ, ಆತ ಹಾಗಾಗೋದಿಕ್ಕೆ ಕಾರಣವೇನು ಎಂಬುದನ್ನು ನೀವು ತೆರೆಯ ಮೇಲೇ ನೋಡಬೇಕು. ತಂದೆಯ ಮನೆ ಬಿಟ್ಟು, ತಾಯಿಯ ಜತೆ ಬಾಡಿಗೆ ಮನೆ ಮಾಡಿಯಲ್ಲುದ್ದುಕೊಂಡು, ಗ್ರಾಸರಿ ಡಿಲವರಿ ಕೆಲಸ ಮಾಡಿಕೊಂಡು ತಾಯಿಯನ್ನು ಸಾಕುತ್ತಾತ್ತಾನೆ. ಹೀಗಿರುವಾಗಲೇ ಅರ್ಜುನ ಕೆಲಸ ಮಾಡುವ ಗ್ರಾಸರಿ ಷಾಪ್‌ಗೆ ಗ್ರಾಹಕರೊಬ್ಬರಿಂದ ಕರೆ ಬರುತ್ತದೆ, ಆ ಕರೆಯನ್ನು ಸ್ವೀಕರಿಸಿದ ಅರ್ಜುನ್, ಕರೆ ಮಾಡಿದ ವ್ಯಕ್ತಿಯನ್ನು ಹುಡುಕಿಕೊಂಡು ಹೋಗುತ್ತಾನೆ, ಈತನ ನಡವಳಿಕೆ ಈತನ ಜತೆಗೇ ಕೆಲಸ ಮಾಡುತ್ತಿದ್ದ ಸ್ನೇಹಿತರಲ್ಲಿ ಅನುಮಾನ ಮೂಡಿಸುತ್ತದೆ, ಏಕೆಂದರೆ ಈ ಮೂವರೂ ಪ್ರಾಣ ಸ್ನೇಹಿತರು, ತಮ್ಮಲ್ಲೇನೇ ಇದ್ದರೂ ಎಲ್ಲವನ್ನು ಹಂಚಿಕೊಳ್ಳುತ್ತಿರುತ್ತಾರೆ, ಹೀಗಿರುವಾಗ ತಮಗೆ ಹೇಳದೇ ಸ್ನೇಹಿತ ಅರ್ಜುನ್ ಏನೋ ವ್ಯವಹಾರ ನಡೆಸುತ್ತಿರುವನೆಂದು ಆತನನ್ನು ಹಿಂಬಾಲಿಸಿಕೊಂಡು ಹೋಗುತ್ತಾರೆ, ಆಗ ಅಲ್ಲೂ ಅವರಿಗೆ ಆಶ್ಚರ್ಯ ಕಾದಿರುತ್ತದೆ, ಹೀಗೆ ಚಿತ್ರದ ಪ್ರತಿ ದೃಶ್ಯವೂ ಕುತೂಹಲ ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡುತ್ತಲೇ ಸಾಗುತ್ತದೆ,

ಸನ್‌ರೈಸ್ ಎಂಟರ್‌ಟೈನ್ಮೆಂಟ್ ಅಂಡ್ ಫಿಲಂಸ್ ಬ್ಯಾನರ್ ಅಡಿ ಪ್ರಸಾದ್ ಕುಮಾರ್ ನಾಯ್ಕ ಅವರ ನಿರ್ಮಾಣದ ಈ ಚಿತ್ರದಲ್ಲಿ ಶ್ರೀಹನ್, ದಿವ್ಯಾಸುರೇಶ್ ನಾಯಕ, ನಾಯಕಿಯಾಗಿದ್ದು, ತುಳು ಹಾಸ್ಯನಟ ಅರವಿಂದ್ ಬೋಳಾರ್ ಸೇಹಿತನಾಗಿ ನಟಿಸಿದ್ದಾರೆ, ಕಾಮಿಡಿ, ಥ್ರಿಲ್ಲರ್ ಕಥಾಹಂದರ ಇರೋ ಈ ಚಿತ್ರದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಇಡೋ ಮೂಲಕ ನಿರ್ದೇಶಕರು ಕಡೇ ಸೀನ್‌ವರೆಗೂ ಕುತೂಹಲ ಕಾಯ್ದುಕೊಂಡಿದ್ದಾರೆ, ಆದರೆ ಸ್ಕ್ರಿಪ್ಟ್, ನಿರೂಪಣೆಯಲ್ಲಿ ಇನ್ನಷ್ಟು ಹಿಡಿತ ಸಾಧಿಸಬೇಕಿತ್ತು, ಕಥೆಯಲ್ಲಿ ಗಟ್ಟಿಕಥೆ ಬೇಕಿತ್ತು ಎನಿಸುತ್ತದೆ, ಅದನ್ನು ಬಿಟ್ಟರೆ ಚಿತ್ರದ ಇಬ್ಬರು ನಾಯಕಿಯರೂ ಮುದ್ದಾಗಿ ಕಾಣಿಸಿಕೊಂಡಿದ್ದು, ಉತ್ತಮ ಅಭಿನಯ ನೀಡಿದ್ದಾರೆ, ಇನ್ನು ನಾಯಕ ಶ್ರೀಹನ್ ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ವಿಕಾಸ್ ವಿಶ್ವಕರ್ಮ ಅವರ ಸಂಗೀತದ ಹಾಡುಗಳು ಕೇಳಲು ಇಂಪಾಗಿವೆ, ಜತೆಗೆ ಹಿನ್ನೆಲೆ ಸಂಗೀತ ಚಿತ್ರಕಥೆಯ ಓಟಕ್ಕೆ ಸಾಥ್ ನೀಡಿದೆ, ಮಂಜುನಾಥ್ ನಾಯಕ್ ಅವರ ಕ್ಯಾಮೆರಾವರ್ಕ್ ಕೂಡ ಚೆನ್ನಾಗಿದೆ. ಇಡೀ ಚಿತ್ರವನ್ನು ಮಂಗಳೂರು, ಉಡುಪಿ ಪರಿಸರದಲ್ಲಿ ಕಟ್ಟಿ ಕೊಡಲಾಗಿದ್ದು, ಮಂಗಳೂರು ಭಾಷೆಯನ್ನೇ ಬಳಸಲಾಗಿದೆ. ಕಾಮಿಡಿ, ಥ್ರಿಲ್ಲರ್ ಎರಡಕ್ಕೂ ಚಿತ್ರದಲ್ಲಿ ಸಮಾನ ಅವಕಾಶವಿದ್ದು ವೀಕ್ಷಕರಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ, ಟ್ರಾಫಿಕ್ ಪೊಲೀಸ್ ಪಾತ್ರದಲ್ಲಿ ಶೈಲಶ್ರೀ ಮುಲ್ಕಿ ಅವರು ಗಮನ ಸೆಳೆಯುತ್ತಾರೆ.

Leave a Reply

Your email address will not be published. Required fields are marked *