Popular Posts

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮಾವ ಸೊಸೆ ಕಥೆ “ಜೈ;ಲಲಿತಾ”

ಹಳ್ಳಿಯಲ್ಲಿ ಮಾವ ಸೊಸೆಯ ಮಧ್ಯೆ ನಡೆಯುವ ಪೊಲಿಟಿಕಲ್ ಡ್ರಾಮಾ ಕಥಾನಕ ಒಳಗೊಂಡ ವಿಬಿನ್ನ ಧಾರಾವಾಹಿ ಜೈಲಲಿತಾ. ಡಿ.8ರಿಂದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರತಿದಿನ ಸಂಜೆ 9-30ರಿಂದ ಪ್ರಸಾರವಾಗಲಿರುವ ಈ ಧಾರಾವಾಹಿಯನ್ನು ದರ್ಶಿತ್ ನಿರ್ದೇಶನ ಮಾಡುತ್ತಿದ್ದು, ಶ್ರೀನಿಧಿ ಡಿ. ಎಸ್. ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ನಾಯಕ ಜೈರಾಜ್ ಪಾತ್ರದಲ್ಲಿ ಯುವನಟ ಶಿವಾಂಕ್, ನಾಯಕಿ ಲಲಿತಾಳಾ ಪಾತ್ರದಲ್ಲಿ ಮನಸ್ವಿ ಹಾಗೂ ಮಾವನಾಗಿ ಹಿರುಯನಟ ಸುನಿಲ್ ಪುರಾಣಿಕ್ ಅವರು ನಟಿಸಿದ್ದಾರೆ. ಹಿಕೋರಾ ಖ್ಯಾತಿಯ ನಟಿ ಸ್ಪಂದನಾ ಪ್ರಸಾದ್ ಅವರಿಲ್ಲಿ ಅತ್ತೆ ಪರಮೇಶ್ವರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಜೈಲಲಿತಾ ಸೀರಿಯಲ್ ತಂಡ ಮಾಧ್ಯಮದೊಂದಿಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿತು.

ಹಳ್ಳಿಯ ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದ ಲಲಿತಾ, ಅಚಾನಕ್ಕಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಚುನಾವಣೆಗೆ ನಿಂತು ಗೆದ್ದು, ಗ್ರಾಮ ಪಂಚಾಯ್ತಿ ಅಧ್ಯಕ್ಷೆಯೂ ಆಗುತ್ತಾಳೆ. ಅವಳ ಏಳಿಗೆ ಸಹಿಸದ ಅದೇ ಊರಿನ ರಾಜಕಾರಣಿ ದೇವರಾಜ್, ಲಲಿತಾಳನ್ನು ಮಟ್ಟ ಹಾಕಬೇಕೆಂದು ತನ್ನ ಮಗನಿಗೆ ತಂದುಕೊಂಡು, ಸೊಸೆ ಮಾಡಿಕೊಳ್ಳುತ್ತಾನೆ. ಮದುವೆ ಬಗ್ಗೆ ತನ್ನದೇ ಕನಸುಗಳನ್ನು ಕಟ್ಟಿಕೊಂಡಿದ್ದ ಲಲಿತಾಗೆ ವಿವಾಹ ಬಂಧನ ಶರಪಂಜರದಂತಾಗುತ್ತದೆ, ಊರ ಜನರನ್ನೇ ಗೆದ್ದವಳು ಅತ್ತೆಯ ಮನ ಗೆದ್ದು ಸೊಸೆಯ ಸ್ಥಾನ ಉಳಿಸಿಕೊಳ್ತಾಳಾ? ಆಕೆಯ ಮುಗ್ದತೆಗೆ ಗಂಡ ಜೈರಾಜ್ ಮನ ಸೋಲ್ತಾನಾ? ಇದೆಲ್ಲದಕ್ಕೂ ಜೈಲಲಿತಾ ಉತ್ತರವಾಗಲಿದೆ.

ವೇದಿಕೆಯಲ್ಲಿ ನಿರ್ದೇಶಕ ದರ್ಶಿತ್ ಮಾತನಾಡಿ ಹಳ್ಳಿಯ 3 ಪಾತ್ರಗಳ ಸುತ್ತ ನಡೆಯುವ ಪೊಲಿಟಿಕಲ್ ಡ್ರಾಮಾ ಕಥಾನಕ ಇದಾಗಿದ್ದು, ಎಲ್ಲರಿಗೂ ಕನೆಕ್ಟ್ ಆಗುವಂಥ ಕಥೆಯನ್ನು ಹೇಳಹಿರಟಿದ್ದೇವೆ. ನಿರ್ಮಾಪಕರು ನಾವು ಕೇಳಿದ್ದಕ್ಕಿಂತ ಹೆಚ್ಚಾಗೇ ಕೊಟ್ಟಿದ್ದರಿಂದ ಯಾವುದೇ ಸಿನಿಮಾಗೂ ಕಮ್ಮಿ ಇಲ್ಲದಂತೆ ಜೈಲಲಿತಾ ಮೂಡಿಬಂದಿದೆ, ಲಲಿತಾ ಪಾತ್ರಕ್ಕೆ ಮನಸ್ವಿ ಹೇಳಿ ಮಾಡಿಸಿದಂತಿದ್ದರು. ಅವರಿಂದಲೇ ಆ ಪಾತ್ರಕ್ಕೆ ತೂಕ ಬಂದಿದೆ. ತಂದೆಯ ಪಾತ್ರದಲ್ಲಿ ಸುನಿಲ್ ಪುರಾಣಿಕ್ ಅವರು ಅದ್ಭುತವಾಗಿ ನಟಿಸಿದ್ದಾರೆ. ಜೈ ತಾಯಿ ಪರಮೇಶ್ವರಿಯದು ಸವಾಲಿನ ಪಾತ್ರ, ಅದನ್ನು ಸ್ಪಂದನಾ ಪ್ರಸಾದ್ ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ದಿ.ಯಶವಂತ್ ಸರದೇಶಪಾಂಡೆ ಅವರು ನಮ್ಮ ಧಾರಾವಾಹಿಯಲ್ಲಿ

ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಮ್ಮ ಜತೆ ಕೆಲಸ ಮಾಡಿದ ಕೆಲವೇ ದಿನಗಳಲ್ಲಿ ಅವರು ನಿಧನರಾದರು ಎಂದರು. ನಟಿ ಸ್ಪಂದನಾ ಪ್ರಸಾದ್ ಮಾತನಾಡಿ ಖಡಕ್ ಅಮ್ಮ, ಮನೆಯ ಸದಸ್ಯರು ತಪ್ಪುಹೆಜ್ಜೆ ಇಟ್ಟಾಗ ಅವರಿಗೆ ಬುದ್ದಿವಾದ ಹೇಳುವ, ಮಗ ಅಂದ್ರೆ ತುಂಬಾ ಇಷ್ಟಪಡುವ, ರಾಜಕಾರಣಿ ಕುಟುಂಬದಲ್ಲೇ ಇದ್ದರೂ ಅದರಿಂದ ದೂರವಿರುವ ಪಾತ್ರ ನನ್ನದು ಎಂದು ತನ್ನ ಪಾತ್ರವನ್ನು ವಿವರಿಸಿದರು,
ನಾಯಕಿ ಮನಸ್ವಿ ಮಾತನಾಡಿ ಎಲ್ಲಾ ರೀತಿಯ ಎಮೋಷನ್ಸ್ ಕ್ಯಾರಿ ಮಾಡುವಂಥ ಲಲಿತಾಳ ಪಾತ್ರ ನನ್ನದು ಎಂದು ಹೇಳಿದರು.

Leave a Reply

Your email address will not be published. Required fields are marked *