1
1
ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಈಗ ಸ್ಟೈಲಿಶ್ ಹೀರೋ. ಶೀಘ್ರದಲ್ಲೇ ಹೊಸ ಚಿತ್ರ ಘೋಷಣೆ
ದಿ.ಸೌಂದರ್ಯ ಜಗದೀಶ್ ಅವರ ಪುತ್ರ ಮಾಸ್ಟರ್ ಸ್ನೇಹಿತ್ ಇದೀಗ ನಾಯಕನಾಗಿ ಚಿತ್ರರಂಗಕ್ಕೆ ಸ್ಟೈಲಿಶ್ ಆಗಿ ರೀಎಂಟ್ರಿ ಕೊಡಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇಂದು ಸ್ನೇಹಿತ್ ಹುಟ್ಟುಹಬ್ಬ.

ಇದೇ ಸಂದರ್ಭದಲ್ಲಿ ಅವರು ತಾವು ನಾಯಕನಾಗುತ್ತಿರುವ ಹೊಸ ಸುದ್ದಿಯನ್ನು ಕೊಟ್ಟಿದ್ದಾರೆ. ತಮ್ಮ ಮಗನನ್ನು ಹೀರೋ ಮಾಡಬೇಕು ಎನ್ನುವುದು ಅವರ ತಂದೆ ಜಗದೀಶ್ ಅವರ ದೊಡ್ಡ ಕನಸಾಗಿತ್ತು. ಸ್ನೇಹಿತ್ ಚಿಕ್ಕವನಿದ್ದಾಗಲೇ ತಮ್ಮದೇ ಬ್ಯಾನರ್ ಮೂಲಕ ಅಪ್ಪು ಪಪ್ಪು ಹಾಗೂ ಸ್ನೇಹಿತರು ಚಿತ್ರಗಳಲ್ಲಿ ನಾಯಕನನ್ನಾಗಿ ಪರಿಚಯಿಸಿದ್ದರು. ಸ್ನೇಹಿತರು ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಅಭಿನಯಿಸಿದ್ದರು. ಆದರೆ ತಮ್ಮ ಕನಸನ್ನು ನನಸು ಮಾಡುವ ಮೊದಲೇ ಇಹಲೋಕ ತ್ಯಜಿಸಿದ್ದರು. ಇದೀಗ ತಂದೆಯ ಕನಸನ್ನು ನನಸು ಮಾಡಲು ಸ್ನೇಹಿತ್ ಹೊರಟಿದ್ದಾರೆ. ಸ್ನೇಹಿತ್ ತಾಯಿ ಹಾಗೂ ಸಹೋದರಿ ಈತನ ಪ್ರಗತಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಈಗಾಗಲೇ ಆಕ್ಟಿಂಗ್, ಆಕ್ಷನ್, ಡಾನ್ಸ್, ಸೇರಿದಂತೆ ಹೀರೋ ಆಗಲು ಬೇಕಾದ ಎಲ್ಲಾ ತಯಾರಿಯನ್ನೂ ಮಾಡಿಸಿದ್ದಾರೆ. ಶೀಘ್ರದಲ್ಲೇ ಸ್ನೇಹಿತ್ ನಾಯಕತ್ವದ ಹೊಸ ಚಿತ್ರ ಪ್ರಾರಂಭವಾಗಲಿದೆ.