Popular Posts

ಲಾಯರ್ ಹುಡುಕಿಕೊಂಡು ಬಂತು ಸಿಎಂ ಆಗೋ ಯೋಗ

Rating : *** (3/5)

ಕೋರ್ಟಲ್ಲಿ ವಾದಮಾಡೋ ಲಾಯರ್‌ಗೆ ಚುನಾವಣೆ ಎದುರಿಸಿ ಬಹುಮತ ಪಡೆಯದೆ ರಾಜ್ಯದ ಮುಖ್ಯಮಂತ್ರಿಯಾಗುವ ಯೊಗ ಹುಡುಕಿಕೊಬಂದಾಗ ಹೇಗಿರುತ್ತೆ ಅಂತ ಯೋಚಿಸಿದಾಗ ಅದಕ್ಕುತ್ತರ ಕಾಮನ್ ಮ್ಯಾನ್ ಚಿತ್ರದಲ್ಲಿ ಸಿಗುತ್ತೆ. ಅದನ್ನೇ ನಿರ್ದೇಶಕ ಓಂಸಾಯಿಪ್ರಕಾಶ್ ಅವರು ಮನರಂಜನಾತ್ಮಕವಾಗಿ ಹೇಳಿದ್ದಾರೆ, ಕೆರೆಬೇಟೆ ನಟ ಗೌರಿಶಂಕರ್ ನ್ಯಾಯವಾದಿ ಕುಮಾರ ಕಂಸಾಳೆ ನಂತರ ರಾಜಕಾರಣಿಗಳ ತಂತ್ರದಿಂದ ರಾಜ್ಯದ ಸಿಎಂ ಆಗುವ ಪಾತ್ರ ಮಾಡಿದ್ದಾರೆ. ಮೊದಲು ಲಾಯರ್ ನಂತರ ಮುಖ್ಯಮಂತ್ರಿ ಹೀಗೆ ಎರಡು ಬೇರೆ ಬೇರೆ ಶೇಡ್ ಪಾತ್ರವನ್ನವರು ನಿರ್ವಹಿಸಿದ್ದಾರೆ.

ರಾಜ್ಯದ ಪ್ರತಿ ಪ್ರಜೆಗೂ ಸರ್ಕಾರವನ್ನು ಪ್ರಶ್ನಿಸುವ ಹಕ್ಕಿರುತ್ತದೆ. ಒಂದು ಅನ್ಯಾಯ ನಡೆದಾಗ ಅವರಿಗೆ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ಕೊಡಿಸೋದ್ರಲ್ಲಿ ಕುಮಾರ್ ಕಂಸಾಳೆ ತುಂಬಾ ಚಾಣಾಕ್ಷ. ಮೆಡಿಕಲ್ ಶಾಪ್ ಓನರ್, ಡಾಕ್ಟರ್‌ಗಳ ಮೇಲೆ ಕೇಸ್‌ಹಾಕಿ ಅವರಿಗೆ ಇಕ್ಕಟ್ಟಿಗೆ ಸಿಕ್ಕಿಸುತ್ತಿದ್ದ ಕುಮಾರನಿಗೆ ಒಮ್ಮೆ ವಿಧಾನಸೌಧದ ಮುಂದೆ ಪೊಲೀಸರಿಂದ ಆದ ಅವಮಾನ, ಅಲ್ಲಿ ಸಚಿವರೊಬ್ಬರು ಆಡಿದ ಮಾತು ಆತನ ತಲೆಯಲ್ಲಿ ಹೊಸ ಆಲೋಚನೆ ಹುಟ್ಟುಹಾಕುತ್ತದೆ, ವಿಧಾನಸೌಧವನ್ನು ಕಟ್ಟಿದ್ದು ಸಾರ್ವಜನಿಕರ ತೆರಿಗೆ ಹಣದಿಂದ, ಹಾಗಾಗಿ ರಾಜ್ಯದ ಪ್ರಜೆಯಾದ ತನಗೂ ಅದರಲ್ಲಿ ಪಾಲಿದೆ, ಆ ಹಕ್ಕನ್ನು ತನಗೆ ನೀಡಬೇಕೆಂದು ಕೋರ್ಟಲ್ಲಿ ಕೇಸ್ ಹಾಕುತ್ತಾನೆ. ಅದರಿಂದ ರಾಜ್ಯದ ಸಿಎಂ, ಸಚಿವರಿಗೆ ಆತಂಕ ಶುರು ಆಗುತ್ತದೆ. ಆ ಪ್ರಕರಣ ಯಾವ ಯಾವ ತಿರುವುಪಡೆದುಕೊಳ್ಳುತ್ತದೆ, ಕೊನೆಗೆ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎನ್ನುವುದೇ ಕಾಮನ್ ಮ್ಯಾನ್ ಚಿತ್ರದ ತಿರುಳು‌ ಹಾಲಿ ಮುಖ್ಯಮಂತ್ರಿಯಾಗಿದ್ದ ಮಾವಳ್ಳಿ ಸದಾಶಿವರಾಯ(ನರಸಿಂಹಮೂರ್ತಿ) ತಾನಾಗೇ ಕುಮಾರ್‌ಗೆ ಸಿಎಂ ಪದವಿ ಬಿಟ್ಟುಕೊಡುವ ಸಂದರ್ಭ ಕ್ರಿಯೇಟ್ ಆಗುತ್ತದೆ, ಹೀಗೆ ಒಬ್ಬ ಮುಖ್ಯಮಂತ್ರಿ ಕಾಮನ್‌ಮ್ಯಾನ್‌ಗೆ ತನ್ನ ಸ್ಥಾನ ಬಿಟ್ಟುಕೊಡಲು ಕಾರಣವೇನು, ಕೇಳದೇ ಒದಗಿಬಂದ ಈ ಅವವಕಾಶವನ್ನು ಕುಮಾರ್ ಹೇಗೆ ಬಳಸಿಕೊಳ್ಳುತ್ತಾನೆ, ಆಡಳಿತ ವ್ಯವಸ್ಥೆಯಲ್ಲಿ ಏನೆಲ್ಲ ಬದಲಾವಣೆಗಳನ್ನು ತರುತ್ತಾನೆ.

ಜನಪರ ಕಾರ್ಯಗಳನ್ನು ಮಾಡಿ ಸೈಎನಿಸಿಕೊಳ್ಳುತ್ತಾನೆ. ಕೊನೆಗೆ ಆತನನ್ನೇ ಕೆಳಗಿಳಿಸಲು ಮಾಜಿ ಸಿಎಂ ಸದಾಶಿವ ಹೂಡಿದ ಕುತಂತ್ರಗಳೇನು, ಈ ಎಲ್ಲ ಪ್ರಶ್ನೆಗಳಿಗೆ ಕಾಮನ್‌ಮ್ಯಾನ್ ಸಿನಿಮಾ ಉತ್ತರ ನೀಡಲಿದೆ. ಇದೊಂದು ಪೊಲಿಟಿಕಲ್ ಡ್ರಾಮಾ, ಜತೆಗೆ ಒಂದು ಲವ್‌ಟ್ರ‍್ಯಾಕ್ ಕೂಡ ಇದೆ. ಅದಕ್ಕೆ ತಕ್ಕಂತೆ ಇಬ್ಬರು ನಾಯಕಿಯರಿದ್ದಾರೆ. ಡ್ಯುಯೆಟ್ ಹಾಡುಗಳೂ ಇವೆ. ಪೊಲಿಟಿಕಲ್ ಡ್ರಾಮಾ ಜತೆಗೆ ಪ್ರಕ್ಷಕರಿಗೆ ರಿಲೀಫ್ ನೀಡುವಮಥ ಕಾಮಿಡಿ ದೃಶ್ಯಗಳೂ ಚಿತ್ರದಲ್ಲಿವೆ‌. ರಾಜಕೀಯದಲ್ಲಿ ಹೀಗೂ ಆಗಬಹುದಾ ಎಂಬ ಪ್ರಶ್ನೆಯನ್ನು ನೋಡುಗರ ಮನಸ್ಸಿನಲ್ಲಿ ಮೂಡಿಸುತ್ತಲೇ ಕಾಮನ್‌ಮ್ಯಾನ್ ಚಿತ್ರದ ಕಥೆ ಸಾಗುತ್ತದೆ. ರಾಜಕೀಯದಲ್ಲಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ಮಂತ್ರಿಗಳು, ಶಾಸಕರು ಏನು ಬೇಕಾದರೂ ಮಾಡಲು ರೆಡಿ ಇರುತ್ತಾರೆ ಎಂಬುದನ್ನು ಚಿತ್ರದಲ್ಲಿ ಎಳೆ ಎಳೆಯಾಗಿ ವಿವರಿಸಲಾಗಿದೆ. ಜನರ ಕಷ್ಟಗಳನ್ನು ಆಲಿಸುವ ಬದಲು ಸ್ವಾಮೀಜಿಗಳ ಬಳಿ ಹೋಗಿ ಸಲಹೆ ಕೇಳುವ ರಾಜಕಾರಣಿಗಳನ್ನು ಈ ಚಿತ್ರದ ಮೂಲಕ ಅಣಕಿಸಲಾಗಿದೆ. ಕಾವಿ ಹಾಕಿಕೊಂಡು ಅನಾಚಾರ ನಡೆಸಿ, ನಂತರ ರಾಜಕಾರಣಿಗಳ ರಕಗಷಣೆಯಲ್ಲಿರುವವರ ಬಣ್ಣವನ್ನು ಬಯಲು ಮಾಡುವ ಪ್ರಯತ್ನವೂ ಚಿತ್ರದಲ್ಲಿದೆ. ಚಿತ್ರ ನೋಡುವಾಗ ಇತ್ತೀಚಿನ ವರ್ಷಗಳಲ್ಲಿ ನಡೆದ ಕೆಲವು ನೈಜ ಘಟನೆಗಳು ಕೂಡ ನೆನಪಾಗುತ್ತವೆ. ರಾಜಕಾರಣಿಗಳ ಜೊತೆ ಕೈಜೋಡಿಸಿದ ಪೊಲೀಸ್ ಇಲಾಖೆಯ ಭ್ರಷ್ಟಾಚಾರದ ಬಗ್ಗೆಯೂ ಸಿನಿಮಾ ಮಾತನಾಡುತ್ತದೆ. ಸಿಎಂ ಸದಾಶಿವ ಆಗಿ ನರಸಿಂಹ ಮೂರ್ತಿ ಅವರು ಉತ್ತಮ ಅಭಿನಯ ನೀಡಿದ್ದಾರೆ, ಮೂಲತ: ರಂಗಭೂಮಿ ಕಲಾವಿದರೂ ಆಗಿರುವ ಅವರು ತಮ್ಮ ಪಾತ್ರಪೋಷಣೆಯನ್ನು ಚೆನ್ನಾಗೇ ಮಾಡಿದ್ದಾರೆ, ಲಾಯರ್ ಕುಮಾರ ಹಾಗೂ ಸಿಎಂ ಎರಡೂ ಪಾತ್ರಗಳಲ್ಲಿ ಗೌರಿಶಂಕರ್ ಅಭಿನಯ ಅಭಿನಂದನಾರ್ಹ, ನಾಯಕಿ ಸೋನಾ ಲಾದ್ವಾ ಕೂಡ ಸಿಕ್ಕ ಅವಕಾಶದಲ್ಲೇ ಉತ್ತಮ ಅಭಿನಯ ನೀಡಿದ್ದಾರೆ, ಕೊನೆಯಲ್ಲಿ ಬರುವ ರಾಜ್ಯಪಾಲರ ಪಾತ್ರದಲ್ಲಿ ಹಿರಿಯನಟ ಅಶೋಕ್ ಗಮನ ಸೆಳೆಯುತ್ತಾರೆ, ಕವಡೆ ಸ್ವಾಮಿಯಾಗಿ ಪಿ.ಡಿ.ಸತೀಶ್‌ಚಂದ್ರ ನಗಿಸುತ್ತಾರೆ. ವಿನಯ್ ಚಂದ್ರ ಅವರ ಮ್ಯೂಸಿಕ್ ಈ ಚಿತ್ರದ ಹೈಲೈಟ್ ಎನ್ನಬಹುದು, ೩ ಹಾಡುಗಳು ಕಣ್ಣಿಗೆ ತಂಪು ಮಾಡಿದರೆ, ಇಡೀ ಚಿತ್ರವನ್ನು ಹಿನ್ನೆಲೆ ಸಂಗೀತ ಕ್ಯಾರಿ ಮಾಡುತ್ತದೆ, ಜೆಜಿ ಕೃಷ್ಣ, ದೀಪಕ್ ಅವರ ಕ್ಯಾಮೆರಾ ವರ್ಕ್ ಕೂಡ ಉತ್ತಮವಾಗಿದೆ,

Leave a Reply

Your email address will not be published. Required fields are marked *