Popular Posts

ಅಮೆರಿಕಾ ಅಮೆರಿಕಾ 2 ಟ್ರೈಲರ್ ಡಾಲಿ ಧನಂಜಯ ಬಿಡುಗಡೆ

ಅಮೆರಿಕಾ ಅಮೆರಿಕಾ, ನನ್ನ ಪ್ರೀತಿಯ ಹುಡುಗಿ, ಅಮೃತಧಾರೆ, ಮಾತಾಡ್ ಮಾತಾಡ್ ಮಲ್ಲಿಗೆ ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ಕನ್ನಡಿಗರಿಗೆ ನೀಡಿದ ಡಾ.ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದ ಮತ್ತೊಂದು ಚಿತ್ರ ‘ಅಮೆರಿಕಾ ಅಮೆರಿಕಾ -2’ ಬಿಡುಗಡೆಗೆ ಸಿದ್ದವಾಗಿದೆ. ನಿರೂಪ್ ಭಂಡಾರಿ, ಪೃಥ್ವಿ ಅಂಬಾರ್, ಶಾನ್ವಿ ಶ್ರೀವಾತ್ಸವ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಮೈಸೂರಿನಲ್ಲಿ ನಡೆಯಿತು.
ಅಮೆರಿಕಾ ಅಮೆರಿಕಾ-2. ಹಳೇ ಚಿತ್ತದ ಮುಂದುವರಿದ ಭಾಗವಲ್ಲ, ನುಡಿ, ನಿನಾದ್, ನೀಲ್ ಹಿಂದಿನ ಮೂರು ಪಾತ್ರಗಳನ್ನು ಪ್ರತಿಬಿಂಬಿಸುತ್ತವೆ. ಮೈಸೂರಿನ ಚಿಕ್ಕ ಕಥೆಯನ್ನು ಇಟ್ಟುಕೊಂಡು ಮಾಡಿದಂಥ ಚಿತ್ರವಿದು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಎಪಿ ಜ್ಞಾನಪ್ರಕಾಶ್ (ಮುಕ್ತ ವಿವಿ ಉಪಕುಲಪತಿಗಳು), ಈ ಚಿತ್ರ ಮತ್ತೊಮ್ಮೆ ಕೀರ್ತಿಪತಾಕೆ ಹಾರೈಸಲಿ ಎಂದು ಹಾರೈಸಿದರು.
ಟ್ರೈಲರ್ ಬಿಡುಗಡೆ ಮಾಡಿದ ಡಾಲಿ ಧನಂಜಯ್ ಮಾತನಾಡುತ್ತ ಮೈಸೂರಲ್ಲಿ ಟ್ರೈಲರ್ ರಿಲೀಸಾಗ್ತಿರೋದಕ್ಕೆ ಖುಷಿಯಾಗ್ತಿದೆ. ನಾಗತಿಹಳ್ಳಿ ಚಂದ್ರಶೇಖರ್ ಅವರು ದೊಡ್ಡ ಬೇರು, ಅಂದಿನಿಂದ ಇವತ್ತಿನವರೆಗೂ ಒಳ್ಳೊಳ್ಳೆ ಸಿನಿಮಾಗಳನ್ನು ಮಾಡುತ್ತಾ ಬಂದಿದ್ದಾರೆ. ನಾವಿಲ್ಲಿ ನಿಂತಿದ್ದೇವೆಂದರೆ ಇವರೆಲ್ಲರ ಕಾಂಟ್ರಿಬ್ಯೂಷನ್ ತುಂಬಾ ಇದೆ. ಚಿತ್ರರಂಗದ ಈಗಿನ ಸಂದರ್ಭದಲ್ಲಿ ಒಳ್ಳೆ ಫ್ಯಾಮಿಲಿ ಸ್ಟೋರಿ ಬೇಕಿದೆ, ಆ ಕೊರತೆಯನ್ನು ಈ ಸಿನಿಮಾ ತುಂಬಲಿ, ಈ ಮೂರು ಜನರ ಕಾಂಬೋ ಮ್ಯಾಜಿಕ್ ಮಾಡಲಿ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ನಾಗತಿಹಳ್ಳಿ ಚಂದ್ರಶೇಖರ್ ಇನ್ನು 10-11 ದಿನಗಳಲ್ಲಿ ನನಗೆ ಹೆರಿಗೆ ಆಗ್ತಾ ಇದ್ದು,
ಈಗಾಗಲೇ ನೋವು ಶುರು ಆಗಿದೆ, ಭಯ, ಟೆನ್ಷನ್ ಎರಡೂ ಇದೆ. 30 ವರ್ಷಗಳ ಜರ್ನಿಯಲ್ಲಿ ಈ ಸಿನಿಮಾ ಮಾಡಲು ಒಂದಷ್ಟು ಬೇಡಿಕೆ ಬಂದಿತ್ತು. ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೆ. ಅದು ಈಗ ಬಂದಿದೆ. ನಾನು ಯಾವಾಗಲೂ ಪ್ರೇಕ್ಷಕರು ನನಗಿಂತ ಹೆಚ್ಚು ಬುದ್ದಿವಂತರೆಂದು ಭಾವಿಸಿ ಸಿನಿಮಾ ಮಾಡುತ್ತೇನೆ. ಕನ್ನಡ ಪ್ರೇಕ್ಷಕರ ಮೇಲೆ ಅಪಾರ ನಂಬಿಕೆ, ಗೌರವ ಇದೆ. ಒಬ್ಬ ಸಾಧಾರಣ ಮೇಷ್ಟ್ರಿಗೆ ಇಷ್ಟು ದೊಡ್ಡ ಗೌರವ ಕೊಟ್ಟಿದ್ದಾರೆ. ಧನಂಜಯ್, ನಾನು ಮಾಡಿದ ಒಂದು ಮೆಸೇಜ್ ಗೆ ಬೆಲೆಕೊಟ್ಟು ಬಂದಿದ್ದಾರೆ. ಪತ್ನಿ ಶೋಭಾ ಈ ಕಾದಂಬರಿ ಓದಿ ಸಿನಿಮಾ ಮಾಡಲು ಸಲಹೆ ನೀಡಿದರು. ಅಲ್ಲಿಂದ ಈ ಸಿನಿಮಾ ಜರ್ನಿ ಶುರುವಾಯಿತು. ನಕುಲ್ ಅಭ್ಯಂಕರ್ ಟ್ರೈಲರ್ ಹಾಗೂ ಚಿತ್ರಕ್ಕೆ ಅದ್ಭುತವಾಗಿ ಹಿನ್ನೆಲೆ ಸಂಗೀತ‌ ಮಾಡಿ ಕೊಟ್ಟಿದ್ದಾರೆ. ಚಿತ್ರವನ್ನು ಎಲ್ಲರೂ ಥೇಟರಿನಲ್ಲೇ ನೋಡಿ, ಕಲೆಯ ಭವ್ಯತೆಯನ್ನು ಆನಂದಿಸಿ, 3 ದಿನ ಮೊದಲೇ ಪ್ರೀಮಿಯರ್ ಶೋಗಳು ಪ್ರಾರಂಭವಾಗಲಿವೆ ಎಂದು ವಿವರಿಸಿದರು.

ನಾಯಕ ನಿರೂಪ್ ಭಂಡಾರಿ ಮಾತನಾಡಿ ಮೊದಲಬಾರಿಗೆ ನನ್ನ ಸಿನಿಮಾದ ಟ್ರೈಲರ್ ನಾನು ಓದಿ ಬೆಳೆದ ನನ್ನೂರಲ್ಲೇ ಆಗ್ತಿದೆ. ಈ ಸಿನಿಮಾದಲ್ಲಿ ಮೈಸೂರು, ಅಮೆರಿಕಾದ ಜತೆಗೆ ಒಂದು ಭಾಗವಾಗಿದೆ. ಹಳೇ ಅಮೆರಿಕಾ ಅಮೆರಿಕಾ ಸಿನಿಮಾ ನೋಡಿದವರು ನಿಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಈ ಚಿತ್ರ ನೋಡ್ತೀರಾ. ಭೂಮಿ, ಶಶಾಂಕ್, ಸೂರ್ಯ ಈ ಪಾತ್ರಗಳ ಫೀಲನ್ನು ನಮ್ಮ ಸಿನಿಮಾ ಕೊಡುತ್ತೆ. ಒಳ್ಳೆ ಸಿನಿಮಾನ ಜನ ಯಾವತ್ತೂ ಸೋಲಿಸಿಲ್ಲ ಎಂದರು.
ನಾಯಕಿ ಶಾನ್ವಿ ಶ್ರೀವಾತ್ಸವ್ ಮಾತನಾಡುತ್ತ ನನ್ನ ಕೆರಿಯರ್ ನಲ್ಲೇ ನಾನಿಂಥ ಪಾತ್ರವನ್ನು ಮಾಡಿಲ್ಲ, ಇದುಕೇವಲ ಗಂಡು, ಹೆಣ್ಣಿಗಲ್ಲ, ಎಲ್ಲರಿಗೂ ಇಷ್ಟವಾಗುವಂಥ ಸಿನಿಮಾ. ಮೈಸೂರಿನಿಂದ ಆರಂಭವಾಗಿ ಅಮೆರಿಕಾದವರೆಗೂ ಸಾಗುತ್ತದೆ ಎಂದರು. ಮತ್ತೊಬ್ಬ ನಟ ಪೃಥ್ವಿ ಅಂಬಾರ್ ಮಾತನಾಡಿ ಕನ್ನಡದ ಕೆಲವೇ ಪ್ರೇಮಕಾವ್ಯಗಳಲ್ಲಿ ಅಗ್ರಗಣ್ಯ ಸ್ಥಾನದಲ್ಲಿ‌ ನಿಲ್ಲುವಂಥ ಚಿತ್ರ. ಪಾತ್ರಗಳು ಅಮೆರಿಕಾ, ಯುರೋಪ್ ವರೆಗೂ ಹೋಗಿದ್ದರೂ, ಆ ಮೂರರ ಆತ್ಮ ಮೈಸೂರಲ್ಲೇ ಇರುತ್ತೆ, ಅದೇ ಈ ಸಿನಿಮಾ. ಶಾನ್ವಿ ಅವರ ಬೆಸ್ಟ್ ಪರ್ ಫಾರ್ಮನ್ಸ್ ಈ ಚಿತ್ರದಲ್ಲಿದೆ. ನನ್ನ ಲೈಫಲ್ಲೇ ಇದು ವಿಶೇಷವಾದ ಚಿತ್ರ ಎಂದು ಹೇಳಿದರು.
ನಟ ಮಂಡ್ಯ ರಮೇಶ್, ಹಿರಿಯನಟ ರಂಗಾಯಣ ರಘು, ಸಂಗೀತ ನಿರ್ದೇಶಕ ನಕುಲ್ ಅಭ್ಯಂಕರ್ ಚಿತ್ರದ ಕುರಿತಂತೆ ಮಾತನಾಡಿದರು.
ಮನೋಮೂರ್ತಿ ಅವರ ಸಂಗೀತ ಸಂಯೋಜನೆ, ಎಸ್.ಕೆ.ರಾವ್ ಅವರ ಛಾಯಾಗ್ರಹಣ, ಶ್ರೀ ಕ್ರೇಜಿ ಮೈಂಡ್ಸ್ ಅವರ ಸಂಕಲನ ಈ ಚಿತ್ರಕ್ಕಿದೆ.

Leave a Reply

Your email address will not be published. Required fields are marked *