1
1
“ಟಾಸ್” ಚಿತ್ರದ ಮೊದಲ ಹಾಡು ಹೆಲೋ ನೀಲಾಂಬರಿ ಬಿಡುಗಡೆ
ಶಿಲ್ಪಾಗಣೇಶ್ ಸಾರಥ್ಯದಲ್ಲಿ ಕನ್ನಡ ಮತ್ತು ತುಳುವಿನಲ್ಲಿ ಸೆ.18ಕ್ಕೆ ಕನ್ನಡ, ತುಳು ಭಾಷೆಯಲ್ಲಿ ಬಿಡುಗಡೆ..
ಗೋಲ್ಡನ್ ಮೂವೀಸ್ ಅರ್ಪಿಸುವ ಅವಿಕಾ ಪ್ರೊಡಕ್ಷನ್ಸ್ ಮತ್ತು ಬಿ.ಆರ್.ಬಿ ಪ್ರೊಡಕ್ಷನ್ಸ್ ನಿರ್ಮಾಣದ ಟಾಸ್ ಚಿತ್ರವನ್ನು ತುಳುನಾಡಿನ ಸೂಪರ್ ಸ್ಟಾರ್ ಅರ್ಜುನ್ ದೇವ್ ಅವರು ನಿರ್ದೇಶಿಸಿದ್ದಾರೆ. ಜತೆಗೆ ಚಿತ್ರದ ನಾಯಕನಾಗೂ ಸಹ ನಟಿಸಿದ್ದಾರೆ. ಡಾ.ದೇವದಾಸ್ ಕಾಪಿಕಾಡ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಮಣಿಕಾಂತ್ ಕದ್ರಿ ಅವರ ಸಂಗೀತ , ಜೋಯೆಲ್ ಶರ್ಮನ್ ಡಿಸೋಜಾ ಅವರ ಛಾಯಾಗ್ರಹಣ, ಯಾಶ್ವಿನ್ ಕೆ. ಶೆಟ್ಟಿಗೇರ್ ಅವರ ಸಂಕಲನ ಟಾಸ್ ಚಿತ್ರಕ್ಕಿದೆ.
ಸುಫ್ರಮ್ ಸೋ ಖ್ಯಾತಿಯಾ ಶನೀಲ್ ಗೌತಮ್ ಈ ಚಿತ್ರದ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ.

ಟಾಸ್ ಸಿನಿಮಾ ನೋಡಿ ಮೆಚ್ಚಿದ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶಿಲ್ಪಾ ಗಣೇಶ್ ಈ ಚಿತ್ರವನ್ನ ಗೋಲ್ಡನ್ ಮೂವೀಸ್ ಬ್ಯಾನರ್ ಮೂಲಕ ಅರ್ಪಿಸುತ್ತಿದ್ದಾರೆ.
ಈ ಚಿತ್ರದ ಮೊದಲ ಹಾಡನ್ನ ಚಿತ್ರತಂಡ ಬಿಡುಗಡೆಗೊಳಿಸಿದೆ. ಹೆಲೋ ಹೆಲೋ ನೀಲಾಂಬರಿ ಎಂಬ ಮೆಲೋಡಿ ಹಾಡಲ್ಲಿ ನಾಯಕ ಅರ್ಜುನ್ ದೇವ್ ಮತ್ತು ನಾಯಕಿ ಸುತೇಜ್ ಶೆಟ್ಟಿ ಇಬ್ಬರೂ ಅಭಿನಯಿಸಿದ್ದು ಇವರಿಬ್ಬರ ಕೆಮಿಸ್ಟ್ರಿ ಆಕರ್ಷಕವಾಗಿದೆ. ಮಣಿಕಾಂತ್ ಕದ್ರಿ ಟ್ಯೂನ್, ಯೋಗರಾಜ್ ಭಟ್ ಅವರ ಸಾಹಿತ್ಯವಿರೋ ಈ ಡ್ಯುಯೆಟ್ ಹಾಡಿಗೆ ಅರ್ಮಾನ್ ಮಲಿಕ್ ದನಿಯಾಗಿದ್ದಾರೆ.

ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಕನ್ನಡ ಮತ್ತು ತುಳು ಭಾಷೆಯಲ್ಲಿ ಈ ಹಾಡು ಲಭ್ಯವಿದೆ. ಟಾಸ್ ಸಿನಿಮಾದ ಹಾಡು ಮತ್ತು ಮೇಕಿಂಗ್ ಗುಣಮಟ್ಟ ಚಿತ್ರದ ಬಗ್ಗೆ ಇರುವ ನಿರೀಕ್ಷೆಯನ್ನು ಹೆಚ್ಚಿಸಿದೆ. ಅಂದ್ಹಾಗೆ ಈ ಹಾಡಿನ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿರೋ ಚಿತ್ರತಂಡ ಸದ್ಯದಲ್ಲೇ ಉಳಿದ ಮಾಹಿತಿ ಹಂಚಿಕೊಳ್ಳಲಿದೆ.