Popular Posts

“ಸದಾ ನಿಮ್ಮೊಂದಿಗೆ ನಿಮ್ಮ ಜೀ಼ ಕನ್ನಡ” ಇದು ಜೀ಼ ಕನ್ನಡದ ಹೊಸ ಅಭಿಯಾನ

ಕನ್ನಡಿಗರ ನೆಚ್ಚಿನ ಜೀ಼ ಕನ್ನಡ ವಾಹಿನಿ ಒಂದು ತಿಂಗಳಲ್ಲಿ 12.2 ಮಿ. ಮನೆಗಳ, 45 ಮಿಲಿಯನ್ ಗೂ ಹೆಚ್ಚು ವೀಕ್ಷಕರನ್ನು ತಲುಪಿದೆ. ಈಗ ‘ಸದಾ ನಿಮ್ಮೊಂದಿಗೆ’ ಎಂಬ ಬ್ರಾಂಡ್ ಟ್ಯಾಗ್ ಲೈನ್ ಮೂಲಕ ಹೊಸತನದೊಂದಿಗೆ ಪ್ರೇಕ್ಷಕರ ಮುಂದೆ ಬರಲಿದೆ. ಸದಾ ನಿಮ್ಮೊಂದಿಗೆ ಅಭಿಯಾನವು ಕರುನಾಡಿನ ಸಂಸ್ಕೃತಿ ಮತ್ತು ಒಗ್ಗಟ್ಟನ್ನು ಬಿಂಬಿಸುತ್ತದೆ.

‘ಕೂಡಿ ಬಾಳಿದರೆ ಸ್ವರ್ಗ ಸುಖ’ ಎಂಬ ಕಾನ್ಸೆಪ್ಟ್ ಇಟ್ಟುಕೊಂಡು ಮಾಡಿರುವ ಈ ಅಭಿಯಾನ ಎಲ್ಲರೂ ಜೊತೆಯಾಗಿ ಬೆಳೆಯೋಣ, ಜೊತೆಯಾಗಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಡುತ್ತದೆ. ಜೊತೆಯಾಗಿರುವ ಪ್ರತಿಯೊಂದು ಕ್ಷಣವೂ ಭರವಸೆ, ಬೆಂಬಲವನ್ನು ಸೂಚಿಸುತ್ತದೆ ಮತ್ತು ನಮ್ಮ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ನಾವು ಯಾವುದೇ ಥರದ ಸವಾಲುಗಳನ್ನು ಎದುರಿಸಬಹುದು ಎಂದು ಹೇಳುತ್ತದೆ.

ಜೀ಼ ಕನ್ನಡದ ಬ್ರಾಂಡ್ ಸಿನಿಮಾ ಇದಾಗಿದ್ದು, ಮಂಡ್ಯದ ಪ್ರಕೃತಿ ಸೌಂದರ್ಯದ ನಡುವೆ ಸೆರೆಹಿಡಿಯಲಾದ ಈ ಚಿತ್ರದಲ್ಲಿ ಕರ್ನಾಟಕದ ಸಾಂಪ್ರದಾಯಿಕ ಮದುವೆ ಸಂದರ್ಭದಲ್ಲಿ ಕಾಣಿಸುವ ರಂಗೋಲಿ, ಚಪ್ಪರ, ಅರಶಿನ ಶಾಸ್ತ್ರ ಹೀಗೆ ಬಗೆ ಬಗೆಯ ಸಾಂಸ್ಕೃತಿಕ ಪರಂಪರೆಯ ಸುಂದರವಾದ ದೃಶ್ಯಕಾವ್ಯವಿದು.

ಮಗಳ ಮದುವೆಯ ಹಿಂದಿನ ದಿನ ಕರ್ತವ್ಯ ನಿಮಿತ್ತ ದೇಶಸೇವೆಗೆ ಮರಳುವ ತಂದೆ, ಆ ತಂದೆಯ ಅನುಪಸ್ಥಿತಿಯಲ್ಲಿ ಇಡೀ ಗ್ರಾಮವೇ ಮುಂದೆ ನಿಂತು ಆತನ‌ ಮಗಳ ಮದುವೆಯನ್ನು ನೆರವೇರಿಸುತ್ತದೆ. ಸೈನಿಕ ವಾಪಾಸಾದಾಗ ಆತನ ಹೆಂಡತಿ “ಇಷ್ಟು ದೊಡ್ಡ ಕುಟುಂಬವೇ ನಮ್ಮ ಜೊತೆ ಇದ್ದ ಮೇಲೆ, ನಮಗೇನು ಚಿಂತೆ” ಎನ್ನುತ್ತಾಳೆ. “ಕೂಡಿ ಬಾಳಿದರೆ ಸ್ವರ್ಗ ಸುಖ” ಎಂಬುದು ಈ ಅಭಿಯಾನದ ಮುಖ್ಯ ಉದ್ದೇಶ.

ಜೀ಼ ಕನ್ನಡದ ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಮಾತನಾಡಿ ” ಸದಾ ನಿಮ್ಮೊಂದಿಗೆ ನಿಮ್ಮ ಜೀ಼ ಕನ್ನಡ ಅಭಿಯಾನವು ನಾವು ನಮ್ಮ ವೀಕ್ಷಕರ ಜೊತೆಗೆ ಹೊಂದಿರುವ ಭಾವನೆಗಳ ಸಂಭ್ರಮಾಚರಣೆ. ಇದು ಬರೀ ರಿಬ್ರ್ಯಾಂಡಿಂಗ್ ಆಗಿರದೆ ವೀಕ್ಷಕರ ಜೊತೆಗೆ ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಮಾಡಲಿದೆ” ಎಂದರು.

23ನೇ ಜೀ ಸಿನಿ ಅವಾರ್ಡ್ಸ್ 2025 ರ ಸಂದರ್ಭದಲ್ಲಿ ಈ ಅಭಿಯಾನವನ್ನು ಏಳು ಭಾಷೆಯಲ್ಲಿ ಅನಾವರಣಗೊಳಿಸಲಾಯಿತು.
‘ಸದಾ ನಿಮ್ಮೊಂದಿಗೆ ನಿಮ್ಮ ಜೀ಼ ಕನ್ನಡ’ ಅಭಿಯಾನದಿಂದ ಜೀ಼ ಕನ್ನಡ ಬರೀ ಕಂಟೆಂಟ್ ಪ್ರೊವೈಡರ್ ಆಗಿರದೇ, ಒಗ್ಗಟ್ಟು, ಮೌಲ್ಯಗಳು, ಸಾಂಸ್ಕೃತಿಕ ಹಾಗು ಕನ್ನಡನಾಡಿನ ಪರಂಪರೆಯನ್ನು ಎತ್ತಿಹಿಡಿಯುವ ಕಲ್ಚರಲ್ ಪ್ರೊವೈಡರ್ ಆಗಲಿದೆ.

Leave a Reply

Your email address will not be published. Required fields are marked *