Popular Posts

“ಪರಾಕ್” ಮಾಸ್ ಟೀಸರ್ ರಿಲೀಸ್ ಆಕ್ಷನ್ ಅವತಾರದಲ್ಲಿ ಶ್ರೀಮುರಳಿ

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು ಪರಾಕ್. ಸಿನಿಮೋತ್ಸಾಹ ಇರೋ ಹೊಸಬರ ತಂಡ ಸೇರಿ ಮಾಡುತ್ತಿರುವ ಈ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆಯಿದೆ. ಅದಕ್ಕೆ ತಕ್ಕಂತೆ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ. ಯುವ ನಿರ್ದೇಶಕ ಹಾಲೇಶ್‌ ಕೋಗುಂಡಿ ನೊದಲಬಾರಿಗೆ ಪರಾಕ್‌ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬ್ರ್ಯಾಂಡ್ ಸ್ಟುಡಿಯೋಸ್ ಬ್ಯಾನರ್ ಅಡಿ ಈ ಚಿತ್ರ ನಿರ್ಮಾಣವಾಗುತ್ತಿದೆ.

ಬೆಂಗಳೂರಿನ ಖಾಸಗಿ ಮಾಲ್ ನಲ್ಲಿ ಪರಾಕ್ ಚಿತ್ರದ ಟೀಸರ್ ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ನಿರ್ದೇಶಕ ಹಾಲೇಶ್ ಕೊಗುಂಡಿ ಮಾತನಾಡಿ, ಇದು ಜಸ್ಟ್ ಟೀಸರ್ ಅಷ್ಟೇ. ಸಿನಿಮಾದಲ್ಲಿ ಸಾಕಷ್ಟು ವಿಷಯಗಳನ್ನು ಹೇಳಿದ್ದೇವೆ. ಶ್ರೀಮುರಳಿ ಅವರ ಜತೆ ಕೆಲಸ ಮಾಡುತ್ತಿರುವುದು ತುಂಬಾ ಖುಷಿಯಾಗಿದೆ. ನಿಮ್ಮ ಬೆಂಬಲ ಸದಾ ಇರಲಿ ಎಂದರು.

‌ನಟ ಶ್ರೀಮುರಳಿ ಮಾತನಾಡಿ, ಪರಾಕ್ ಟೀಸರ್ ನೋಡಿದ್ರೆ ಗೊತ್ತಾಗುತ್ತೆ. ಇದು ಸುಲಭವಾಗಿ ಆದಂಥ ಕೆಲಸವಲ್ಲ. ಅದಕ್ಕೆ ಆದ ಶ್ರಮ ದೊಡ್ಡದು. ಸಾಕಷ್ಟು ಮೀಟಿಂಗ್ ಕೂಡ ಆಯ್ತು. ಇದನ್ನೆ ತೆಗೆಯಲು ಎರಡೂವರೆ ವರ್ಷ ತೆಗೆದುಕೊಂಡೆವು. ಇನ್ನು ಪರಾಕ್ ಸಿನಿಮಾದ ಕಥೆಗೆ ಮೂರೂವರೆ ವರ್ಷ ಟೈಮ್ ಕೊಟ್ಟಿದ್ದೇವೆ. ಹೊಸಬರು, ಹೊಸ ಪ್ರೊಡಕ್ಷನ್ ಜೊತೆ ಯಾಕೆ ಸಿನಿಮಾ ಮಾಡಿದ್ದೇನೆ? ಅನ್ನೋ ಪ್ರಶ್ನೆ ನಿಮಗೆ ಬರಬಹುದು. ಹೌದು, ಅವರ ಜತೆ ಕೆಲಸ ಮಾಡೋದು ನನಗೆ ಕಿಕ್ಕು. ಹೊಸಬರನ್ನು, ಅವರ ಆಲೋಚನೆಯನ್ನು ನಾನು ಇಷ್ಟಪಡುತ್ತೇನೆ, ನಂಬುತ್ತೇನೆ. ಪರಾಕ್ ಎಂಬ ಅದ್ಬುತ ಪ್ರಯತ್ನವನ್ನು ಪ್ರತಿಯೊಬ್ಬರಿಗೂ ನಕ ತೋರಿಸಬೇಕು ಎಂಬ ಅಸೆ, ಹಠ, ಕಾಳಜಿಯಿಂದ ಈ ಸಿನಿಮಾ ಮಾಡುತ್ತಿದ್ದೇವೆ.‌ ಈ ಹೊಸತಂಡ ನಮ್ಮ ಚಿತ್ರರಂಗದ ಆಸ್ತಿ. ಚಿತ್ರದ ಬಗ್ಗೆ ಹೆಚ್ಚಿನದಾಗಿ ಹೇಳಲ್ಲ. ಇನ್ನೂ ಚಿತ್ರೀಕರಣ ಮಾಡುವುದು ಬಾಕಿ ಇದೆ ಎಂದರು.

ಪರಾಕ್ ಟೀಸರ್ ನಲ್ಲಿ ಸಿಕ್ಸ್ ಪ್ಯಾಕ್ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಶ್ರೀಮುರಳಿ, ಆಕ್ಷನ್ ಸೀನ್ ಗಳಲ್ಲಿ ಅಬ್ಬರಿಸಿದ್ದಾರೆ. ಚರಣ್ ರಾಜ್ ಅವರ ಮ್ಯೂಸಿಕ್, ಸಂದೀಪ್ ಅವರ ಕ್ಯಾಮೆರಾ ಕೈಚಳಕ, ನಿರ್ದೇಶಕ ಹಾಲೇಜ್ ಅವರ ವಿಷನ್ ಟೀಸರ್ ನಲ್ಲಿ ಅಚ್ಚುಕಟ್ಟಾಗಿ ಮೂಡಿಬಂದಿದೆ.

ಚರಣ್ ರಾಜ್ ಎಂ.ಆರ್. ಅವರ ಸಂಗೀತ ನಿರ್ದೇಶನ, ಸಂದೀಪ್ ವಲ್ಲೂರಿ ಅವರ ಛಾಯಾಗ್ರಹಣ, ರಕ್ಷಿತ್ ಕಾಪ್ ಅವರ ಸಂಕಲನ‌, ಡಾ ಕೆ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಮಂಜುನಾಥ್ ಟಿ, ಮೋಹನ್ ಕೆ ಓ, ಹಾಲೇಶ್ ಕೋಗುಂಡಿ ಚಿತ್ರದ ಸಂಭಾಷಣೆ ಬರೆದಿದ್ದಾರೆ. ಸಧ್ಯ 35ರಷ್ಟು ಭಾಗದ ಚಿತ್ರೀಕರಣ ನಡೆಸಲಾಗಿದೆ.

Leave a Reply

Your email address will not be published. Required fields are marked *