1
1

ಬ್ಯಾಕ್ ಟು ಬ್ಯಾಕ್ ಹಾಡುಗಳಿಂದಲೇ ಸದ್ದು ಮಾಡುತ್ತಿರುವ ಮದರ್ ಪ್ರಾಮಿಸ್ ಸಿನಿಮಾದ ಟ್ರೈಲರ್ ನೋಡಿದಾಗ ಇದರಲ್ಲಿ ಎಲ್ಲಾ ರೀತಿಯ ಎಮೋಷನ್ಸ್ ಇರೋ ಸೂಚನೆ ಸಿಕ್ತಿದೆ. ಫ್ರೆಂಡ್ ಶಿಪ್, ಡಾನ್ ಗಳ ಗ್ಯಾಂಗ್ , ಕ್ರಿಕೆಟ್ ಬೆಟ್ಟಿಂಗ್, ಮದರ್ ಸೆಂಟಿಮೆಂಟ್ ಹೀಗೆ ಸಾಕಷ್ಟು ವಿಚಾರಗಳು ಈ ಟ್ರೈಲರ್ ನಲ್ಲಿ ಕಾಣುತ್ತವೆ.
ಮದರ್ ಪ್ರಾಮಿಸ್’ ಕಾಮಿಡಿ ಹಾಗೂ ಥ್ರಿಲ್ಲಿಂಗ್ ಕಾನ್ಸೆಪ್ಟ್ ಒಳಗೊಂಡ ಚಿತ್ರ. ಈ ಚಿತ್ರದಲ್ಲಿ ಡಾಲಿ ಧನಂಜಯ ಅಲ್ಲದೆ ನಟ ನಾಗಭೂಷಣ್ , ಹಿರಿಯ ನಟಿ ವಿನಯಪ್ರಸಾದ್, ಗೀತಾ, ಗುರುದತ್ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಸಿನಿಮಾ ಮೂಲಕ ಡಾಲಿ ಧನಂಜಯ ಅವರ ಸ್ನೇಹಿತ ಹರ್ಷ ಮುರುಂಡಿ ಶಿವಲಿಂಗಪ್ಪ ನಿರ್ಮಾಪಕರಾಗಿ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನು ಪೂರ್ಣ ಮೈಸೂರು ವಹಿಸಿಕೊಂಡಿದ್ದು ‘ಡೇರ್ ಡೆವಿಲ್ ಮುಸ್ತಾಫ’ ಖ್ಯಾತಿಯ ಶಶಾಂಕ್ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ರಾಹುಲ್ ರಾಯ್ ಅವರ ಕ್ಯಾಮೆರಾ, ನವನೀತ್ ಶ್ಯಾಮ್ ಅವರ ಸಂಗೀತ ನಿರ್ದೇಶನ ಈ ಸಿನಿಮಾಗಿದೆ. ಸದ್ಯ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು ಜುಲೈ 10 ಕ್ಕೆ ಚಿತ್ರವೂ ಬಿಡುಗಡೆಯಾಗಲಿದೆ.