Popular Posts

ಲೈಫ್ ಟುಡೆ ‘ನೀನೊಬ್ಬಳೆ’ ಹಾಡು ವಿ.ನಾಗೇಂದ್ರ ಪ್ರಸಾದ್ ಬಿಡುಗಡೆ

ಕಾಂತ ಕನ್ನಲ್ಲಿ ಅವರ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಲೈಫ್ ಟುಡೆ” ತನ್ನ ಹಾಡುಗಳ ಮೂಲಕವೇ ಸದ್ದುಮಾಡುತ್ತಿದೆ.
ಇತ್ತೀಚೆಗೆ ಈ ಚಿತ್ರದ ” ನೀನೊಬ್ಬಳೆ…” ಎಂಬ ಮತ್ತೊಂದು ಹಾಡು ಬಿಡುಗಡೆಯಾಗಿದೆ. ನಾಯಕ ಕಿರಣ್ ಆದಿತ್ಯ, ನಾಯಕಿ ಲೇಖಾ ಚಂದ್ರ ನಟಿಸಿರುವ ಈ ಹಾಡಿಗೆ ಹಿರಿಯ ಗೀತರಚನೆಕಾರ ಹಾಗು ನಿರ್ದೇಶಕ ಡಾ. ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ ರಚಿಸಿದ್ದು, ಇತ್ತೀಚೆಗೆ ತಾವೇ ಬರೆದಿದ್ದ ಹಾಡನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು. ಕಾಂತ ಕನ್ನಲ್ಲಿ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಮೇಘನಾ ಪ್ರದೀಪ್ ಬಂಡವಾಳ ಹಾಕಿದ್ದಾರೆ. ಶ್ರೀಧರ್ ಸಂಭ್ರಮ್ ಅವರ ಸಂಗೀತ ಈ ಚಿತ್ರಕ್ಕಿದೆ.

ನಾಗೇಂದ್ರ ಪ್ರಸಾದ್ ಮಾತನಾಡಿ ,ಇಡೀ ಸಿನಿಮಾದ ಕಥೆ ಪ್ರೀತಿಯ ಸುತ್ತ ಸಾಗಲಿದೆ. ಯುವಜನರಿಗೆ ಹತ್ತಿರವಾಗುವ ಕಂಟೆಂಟ್ ಇರುವ ಈ ಚಿತ್ರದ ನಾಯಕ ಕಿರಣ್ , ನಿರ್ಮಾಪಕ ಪ್ರದೀಪ್ ಹಾಗು ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಸೇರಿದಂತೆ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ನಿರ್ದೇಶಕ ಕಾಂತ ಕನ್ನಲ್ಲಿ ಮಾತನಾಡಿ, ಚಿತ್ರದ ಗುಣಮಟ್ಟದಲ್ಲಿ ಎಲ್ಲಿಯೂ ರಾಜಿ ಮಾಡಿಕೊಂಡಿಲ್ಲ. ಕಿರಣ್, ನಿರ್ಮಾಪಕ ಪ್ರದೀಪ್ ಅವರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಪ್ರೀತಿ, ತ್ಯಾಗ, ನೋವು, ಕೌಟಂಬಿಕ ಬದ್ದತೆ ಸೇರಿ ಹಲವಾರು ಅಂಶಗಳಿರುವ ಮನರಂಜನಾತ್ಮಕ ಚಿತ್ರ. ಮುಂದಿನ ದಿನಗಳಲ್ಲಿ ಟ್ರೈಲರ್ ಮೂಲಕ ಸಿನಿಮಾದ ಕಥೆ ತಿಳಿಯಲಿದೆ ಎಂದರು.
ನಟ ಕಿರಣ್ ಆದಿತ್ಯ ಮಾತನಾಡಿ ಹೊಸಬರ ಸಿನಿಮಾಗೆ ಬರಗಾಲದಲ್ಲಿ ಸೌಂಡ್ ಮಾಡೋಕೆ ನಾವು ಬರ್ತಾ ಇದ್ದೇವೆ. ಮತ್ತೊಂದು ಮುಂಗಾರು ಮಳೆಯ ರೀತಿ ಬರುವ ಉದ್ದೇಶ ಇದೆ. ಜೂನ್ ತಿಂಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಹಾಡುಗಳು ಒಂದಕ್ಕಿಂತ ಒಂದು ಚೆನ್ನಾಗಿ ಮೂಡಿಬಂದಿದೆ. ಲೈಫ್ ಟುಡೇ ಈ ವರ್ಷದ ಮತ್ತೊಂದು ಸೂಪರ್ ಹಿಟ್ ಆಗಲಿದೆ ಎಂದರು.

ನಿರ್ಮಾಪಕ ಪ್ರದೀಪ್ ಮಾತನಾಡಿ ಚಿತ್ರದ ಹಾಡುಗಳು ಚೆನ್ನಾಗಿ ಮೂಡಿಬಂದಿದೆ ಎಂದು ಎಲ್ಲರ ಶ್ರಮಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿದರು.
ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್ ಮಾತನಾಡಿ ಕನ್ನಡದ ಬಗ್ಗೆ ಹಲವು ಹಾಡುಗಳು ಮೂಡಿಬಂದಿದೆ. ಹಾಡು ಚೆನ್ನಾಗಿ ಮೂಡಿ ಬರಲು ನಟ ಕಿರಣ್ ಆದಿತ್ಯ ಕಾರಣ. ಒಂದೊಂದು ಹಾಡು ಒಂದೊಂದು ರೀತಿ ಬಿಡುಗಡೆ ಆಗಿದೆ. ಗಾಯಕ ಸಂಚಿತ್ ಹೆಗ್ಡೆ ಮತ್ತು ಅನುರಾಧ ಭಟ್ ಉತ್ತಮವಾಗಿ ಹಾಡಿದ್ದಾರೆ ಎಂದರು.

Leave a Reply

Your email address will not be published. Required fields are marked *