Popular Posts

ಸಿನಿಮಾ ನಿರ್ಮಾಣಕ್ಕಿಳಿದ ನಟಿ ಮೈತ್ರಿಯಾಗೌಡ

ಬಣ್ಣದ ಲೋಕಕ್ಕೆ ಒಮ್ಮೆ ಎಂಟ್ರಿ ಕೊಟ್ಟರೆ ಅದರಿಂದ ಹೊರಬರುವುದು ಅಷ್ಟು ಸುಲಭವಲ್ಲ. ಕೆಲವರು ನಟನೆಯಿಂದ ದೂರ ಉಳಿದರೂ, ಇದೇ ಕ್ಷೇತ್ರದಲ್ಲಿ ಏನಾದರೂ ಒಂದು ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಆ ಸಾಲಿಗೆ ನಟಿ ಮೈತ್ರಿಯಾಗೌಡ ಅವರು ಸೇರಿಕೊಳ್ಳುತ್ತಿದ್ದಾರೆ. ’ಮೌರ್ಯ’ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಸಹೋದರಿಯಾಗಿ ನಟಿಸಿ ನಂತರ 8 ಸಿನಿಮಾಗಳಲ್ಲಿ ಮೈತ್ರಿಯಾ ಗೌಡ ಅವರು ನಾಯಕಿಯಾಗಿ ನಟಿಸಿದ್ದಾರೆ. ಮುಂದೆ ಕಾರಣಾಂತರದಿಂದ ಅಭಿನಯಕ್ಕೆ ಬ್ರೇಕ್ ನೀಡಿದ್ದ ಅವರು ಸಮಾಜ ಸೇವೆಯತ್ತ ತಮ್ಮ‌ ಗಮನವನ್ನು ಹರಿಸಿದ್ದರು.

ಇದೀಗ ಮೈತ್ರಿಯಾ ಗೌಡ ಅವರು ಗ್ಲೋಬಲ್ ಟ್ರಸ್ಟ್ ಎಂಬ ಪ್ರೊಡಕ್ಷನ್ ಹೌಸ್ ಆರಂಭಿಸಿ ಆ ಮೂಲಕ ಚಲನಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದರ ಮೊದಲ ಹಂತವಾಗಿ ನಟ ಅನಿರುದ್ದ್, ಹಿರಿಯ ನಿರ್ಮಾಪಕ ಉದಯ್‌ ಕೆ. ಮೆಹ್ತಾ, ವಿಧಾನ ಪರಿಷತ್ ಸದಸ್ಯ ಶರವಣ ಇವರೆಲ್ಲ‌ ಟ್ರಸ್ಟ್ ಉದ್ಗಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೈತ್ರಿಯಾಗೌಡ, ನನ್ನ ಹುಟ್ಟುಹಬ್ಬದ ಸಲುವಾಗಿ ಪ್ರೊಡಕ್ಷನ್ ಸಂಸ್ಥೆಯನ್ನು ಶುರು ಮಾಡಿದ್ದೇನೆ. ಚಿಕ್ಕವಳಿದ್ದಾಗ ಮುಂದೆ ಏನಾಗುತ್ತಿಯಾ ಅಂತ ಯಾರಾದರೂ ಕೇಳಿದರೆ, ನಾನು ನಟಿಯಾಗಬೇಕು, ಸಮಾಜಸೇವೆ ಮಾಡಬೇಕೆಂದು ಹೇಳುತ್ತಿದ್ದೆ. ನಾಯಕಿಯಾದ ಸಮಯದಲ್ಲಿ ನಟ ಅನಿರುದ್ದ್ ಅವರು ಮಾಡುತ್ತಿದ್ದ ಸೇವೆಗಳು, ಉದಯ್‌ ಮೆಹ್ತಾ ಅವರ‌‌ ಕಾರ್ಯವೈಖರಿ ನನಗೆ ಪ್ರೇರಣೆಯಾಯಿತು. ಇವರಿಬ್ಬರ ಪ್ರೇರಣೆಯಿಂದ ಟ್ರಸ್ಟ್ ಶುರು ಮಾಡಿದ್ದೇನೆ. ಇದರ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗುವುದು. ಜತೆಗೆ ಅನಾಥಾಶ್ರಮ, ಗೋಶಾಲೆ, ವೃದ್ದಾಶ್ರಮ, ಬೀದಿ ನಾಯಿಗಳ ರಕ್ಷಣೆ, ಫ್ಯಾಶನ್ ಷೋ ಇನ್ನಿತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈಗಾಗಲೇ ಸಿನಿಮಾಗಾಗಿ ಎರಡು ಕಥೆಗಳನ್ನು ಕೇಳಿದ್ದೇನೆ. ಹೊಸ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ನೂತನ ಚಿತ್ರದ ಬಗ್ಗೆ ತಿಳಿಸುತ್ತೇನೆ ರಂದು ಮೈತ್ರಿಯಾಗೌಡ ‌ಅವರು ಹೇಳಿದರು.

ಈ ಸಂದರ್ಭದಲ್ಲಿ ಕಲಾವಿದರುಗಳಾದ ಯಶಸ್‌ ಸೂರ್ಯ, ರವಿಚೇತನ್ ಅಲ್ಲದೆ ಹಲವಾರು ಕಿರುತೆರೆಯ ಕಲಾವಿದರುಗಳು ಹಾಜರಿದ್ದರು.

Leave a Reply

Your email address will not be published. Required fields are marked *