1
1
ಕೇವಲ 22 ವರ್ಷದ ಕರೆನ್ ಕ್ಷಿತಿ ಸುವರ್ಣ ಪ್ರಥಮ ನಿರ್ದೇಶನದ SEPTEMBER 21 ಚಿತ್ರವು ಫೆಸ್ಟಿವಲ್ ಡಿ ಕ್ಯಾನ್ಸ್ 2026 ರ ಮಾರ್ಶೆ ಡು ಫಿಲಂ ವಿಭಾಗದಲ್ಲಿ ಮೇ 16, 2026ರಂದು ಸಂಜೆ 5:45ಕ್ಕೆ ಪಲೈಸ್ ಥಿಯೇಟರ್ನಲ್ಲಿ ವರ್ಲ್ಡ್ ಪ್ರೀಮಿಯರ್ ಆಗಲಿದೆ. ಹಿಂದಿ ಮತ್ತು ಕನ್ನಡ ಸೇರಿ 2 ಭಾಷೆಗಳಲ್ಲಿ ಚಿತ್ರೀಕರಿಸಲಾದ ಈ ಚಿತ್ರದಲ್ಲಿ ಆಲ್ಝೈಮರ್ ಖಾಯಿಲೆಯ ಹಿನ್ನೆಲೆಯಲ್ಲಿ ತಂದೆ-ಮಗನ ನಡುವೆ ಬಿರುಕು ಬಿಟ್ಟ ಸಂಬಂಧವನ್ನು ಹೇಗೆ ಒಂದುಗೂಡಿಸಿತು ಎಂಬುದನ್ನು ಹೇಳಲಾಗಿದೆ.

ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುವ ತಂದೆ, ತನ್ನ ಹೆಂಡತಿ ಕೋವಿಡ್ ಕಾರಣದಿಂದ ಪಕ್ಕದ ಕೋಣೆಯಲ್ಲಿ ಕ್ವಾರಂಟೈನ್ನಲ್ಲಿದ್ದಾಳೆ ಎಂದು ನಂಬುತ್ತಾನೆ. ದೂರವಾಗಿದ್ದ ಮಗ ಮನೆಗೆ ಹಿಂತಿರುಗಿದಾಗ, ತನ್ನ ವೈಯಕ್ತಿಕ ಮಹತ್ವಾಕಾಂಕ್ಷೆ ಮತ್ತು ತಂದೆಯ ಮೇಲಿನ ಕರ್ತವ್ಯದ ನಡುವೆ ಆಯ್ಕೆ ಮಾಡಬೇಕಾಗುತ್ತದೆ.
ಆಲ್ಝೈಮರ್ ರೋಗಿಗಳಿಗಿಂತ ಅವರನ್ನು ನೋಡಿಕೊಳ್ಳುವವರ ಸಂಕಷ್ಟ ಬಹಳ ದೊಡ್ಡದು ಎಂಬುದನ್ನು ನಿರ್ದೇಶಕ ಸುವರ್ಣ ಹೆಳಿದ್ದಾರೆ. SEPTEMBER 21 ಕುಟುಂಬಗಳ ಮೇಲೆ ಬೀಳುವ ಕಾಣದ ಭಾವನಾತ್ಮಕ ಭಾರವನ್ನು ಮೌನ ಮತ್ತು ಸಂಯಮದ ಮೂಲಕ ತೋರಿಸುತ್ತದೆ.
ನಟ ಪ್ರವೀಣ್ ಸಿಂಗ್ ಸಿಸೋಡಿಯಾ ಅವರು ಆಲ್ಝೈಮರ್ ರೋಗಿಯ ಪಾತ್ರವನ್ನು ಮೌನದಲ್ಲೇ ನೋವನ್ನು ಕಟ್ಟಿಕೊಡುತ್ತಾರೆ. ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಪ್ರಿಯಾಂಕಾ ಉಪೇಂದ್ರ, ಜರೀನಾ ವಹಾಬ್, ಅಜಿತ್ ಶಿಧಯೆ ಮತ್ತು ಅಮಿತ್ ಬೆಹ್ಲ್ ಕಾಣಿಸಿಕೊಂಡಿದ್ದಾರೆ.
ಈ ಚಿತ್ರಕ್ಕೆ ರಾಜಶೇಖರ್ ಕಥೆ-ಚಿತ್ರಕಥೆ ಬರೆದಿದ್ದು, ವಿನಯ್ ಚಂದ್ರಾ ಅವರು ಸಂಗೀತ ಸಂಯೋಜಿಸಿದ್ದಾರೆ.

ವಿಸಿಕಾ ಫಿಲಂಸ್ ಎಫ್.ಎಂ.ಡಿ. ಪ್ರೊಡಕ್ಷನ್ಸ್, ಮತ್ತು ಹಮಾರಾ ಮೂವಿ ಜೊತೆಗೆ ಫಿಲ್ಮ್ಸ್ಮ್ಯಾಕ್ಸ್ ಸೇರಿ ನಿರ್ಮಿಸಿರುವ ಈ ಚಿತ್ರಕ್ಕೆ ಆಲ್ಝೈಮರ್ಸ್ ಅಂಡ್ ರಿಲೇಟೆಡ್ ಡಿಸಾರ್ಡರ್ಸ್ ಸೊಸೈಟಿ ಆಫ್ ಇಂಡಿಯಾ (ARDSI) ಬೆಂಬಲ ನೀಡಿದೆ. ಬಾಲಿವುಡ್ ನಿರ್ದೇಶಕ ಇಮ್ತಿಯಾಜ್ ಅಲಿ ಅವರ ಪತ್ನಿ ಪ್ರೀತಿ ಅಲಿ ಪಾಲುದಾರಿಕೆಯ ಹಮಾರಾ ಮೂವಿ ಈ ಹಿಂದೆ Follower ಮತ್ತು Tortoise Under the Earth ನಂತಹ ಫೆಸ್ಟಿವಲ್ ಚಿತ್ರಗಳನ್ನು ಬೆಂಬಲಿಸಿದೆ. ಭಾವನಾತ್ಮಕ ಕಥೆಗಳಿಗೆ ಹೆಸರಾದ ವಿಸಿಕಾ ಫಿಲಂಸ್ ಇದರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ.
22 ವರ್ಷದ ಸುವರ್ಣ ಕ್ಯಾನ್ಸ್ನಲ್ಲಿ ಪಾದಾರ್ಪಣೆ ಮಾಡುತ್ತಿರುವ ಅತ್ಯಂತ ಕಿರಿಯ ಭಾರತೀಯ ನಿರ್ದೇಶಕಿಯರಲ್ಲಿ ಒಬ್ಬರು.
ಮಾರ್ಶೆ ಡು ಫಿಲಂ ಆಯ್ಕೆ ಈ ಚಿತ್ರದ ಸಾರ್ವತ್ರಿಕ ಸ್ಪರ್ಶಕ್ಕೆ ಸಾಕ್ಷಿ. ಸಾಮಾಜಿಕ ನಿರೂಪಣೆಗಳನ್ನು ಪ್ರಶ್ನಿಸುವ ಹೊಸ ದನಿಗಳನ್ನು ಕ್ಯಾನ್ಸ್ ಯಾವಾಗಲೂ ಸ್ವಾಗತಿಸಿದೆ.
SEPTEMBER 21 ಆಲ್ಝೈಮರ್ ಮತ್ತು ಆರೈಕೆದಾರರ ಸಂಕಷ್ಟವನ್ನು ಜಾಗತಿಕ ಚರ್ಚೆಗೆ ತರುತ್ತಿದೆ. ವಿಶ್ವಾದ್ಯಂತ ಆಲ್ಝೈಮರ್ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಚಿತ್ರ ಸಿನಿಮಾ ಮತ್ತು ತುರ್ತು ಸಾಮಾಜಿಕ ದಾಖಲೆ ಎರಡೂ ಆಗಿ ಮೂಡಿಬರುತ್ತಿದೆ.