Popular Posts

OTT ಯಲ್ಲೂ ಕಮಾಲ್ಮಾಡುತ್ತಿರುವ “ರಾನಿ”

ಗುರುತೇಜ್ ಶೆಟ್ಟಿ ಅವರ ನಿರ್ದೇಶನದ, ಕಿರಣ್ ರಾಜ್ ಅಭಿನಯದ “ರಾನಿ”ಸಿನಿಮಾ Zee 5, OTT platform ನಲ್ಲಿ ಬಿಡುಗೆಯಾಗಿ ಜನ ಮೆಚ್ಚುಗೆ ಪಡೆಯುತ್ತಿದೆ, ರಿಲೀಸಾದ ಎರಡೇ ದಿನದಲ್ಲಿ ಮಿಲಿಯನ್ ವೀಕ್ಷಣೆ ಯಾಗಿ ದಾಖಲೆ ಬರೆದಿದೆ, ಸ್ಟಾರ್ ಕ್ರಿಯೇಷನ್ ಬ್ಯಾನರ್ ನಲ್ಲಿ ಚಂದ್ರಕಾಂತ್ ಪೂಜಾರಿ, ಉಮೇಶ್ ಹೆಗ್ಡೆ ನಿರ್ಮಿಸಿರುವ ಈ ಚಿತ್ರಕ್ಕೆ ಗುರುತೇಜ್ ಶೆಟ್ಟಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ಕಿರಣ್ ರಾಜ್ ಜತೆ ರಾಧ್ಯ,ಸಮೀಕ್ಷಾ, ಅಪೂರ್ವ ಮೂವರು ನಾಯಕಿಯರಿದ್ದು ರವಿ ಶಂಕರ್,ಬಿ ಸುರೇಶ್, ಗಿರೀಶ್ ಹೆಗ್ಡೆ, ಯಶ್ ಶೆಟ್ಟಿ, ಉಗ್ರಂ ರವಿ, ಉಗ್ರಂ ಮಂಜು, ಧರ್ಮಣ್ಣ ಕಡೂರ್, ಸೂರ್ಯ ಕುಂದಾಪುರ, ಮೈಕೋ ನಾಗರಾಜ್‌ ಮುಂತಾದವರ ತಾರಾಗಣವಿದ್ದು, ಮಣಿಕಾಂತ್ ಕದ್ರಿ ಅವರ ಸಂಗೀತ, ರಾಘವೇಂದ್ರ ಕೋಲಾರ ಅವರ ಛಾಯಾಗ್ರಹಣ, ಸತೀಶ್ ಅವರ ಕಲಾ ನಿರ್ದೇಶನ, ಉಮೇಶ್ ಅವ ಸಂಕಲನ‌ ಈ ಚಿತ್ರಕ್ಕಿದೆ‌.‌ ಕಳೆದ ವರ್ಷ ಬಿಡುಗಡೆಯಾದ ಈ ಚಿತ್ರ ಪ್ರೇಕ್ಷಕರು ಹಾಗೂ ವಿಮರ್ಶಿಕರಿಂದ ಮೆಚ್ಚುಗೆ ಪಡೆದಿತ್ತು, ಈಗ OTT ಯಲ್ಲೂ ಅಷ್ಟೇ ಮೆಚ್ಚುಗೆ ಗಳಿಸುತ್ತಿದೆ.

Leave a Reply

Your email address will not be published. Required fields are marked *