Popular Posts

ಸದ್ದು ಮಾಡ್ತಿದೆ ‘ಕರಿಕಾಡ’ ಚಿತ್ರದ ಕಬ್ಬಿನ ಜಲ್ಲೆ ಹಾಡು

ಕನ್ನಡದ ಮತ್ತೊಂದು ವಿಭಿನ್ನ ಪ್ರಯತ್ನವಾಗಿ ಮೂಡಿಬಂದಿರುವ ಕರಿಕಾಡ ಚಿತ್ರವೀಗ ಬಿಡುಗಡೆಗೆ ಸಿದ್ಧವಾಗಿದೆ. ಕನ್ನಡದಲ್ಲಿ ತಯಾರಾಗಿರುವ ಈ ಚಿತ್ರ ಪಂಚಭಾಷೆಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಇದೊಂದು ಮ್ಯೂಸಿಕಲ್ ಜರ್ನಿ, ಅಡ್ವೆಂಚರಸ್ ಡ್ರಾಮಾ ಆಗಿದ್ದು, ಈ ಹಿಂದೆ ಚಿತ್ರದ ಟೀಸರ್ ರಿಲೀಸ್ ಮಾಡಿದ್ದ ಚಿತ್ರತಂಡ ಇದೀಗ ಕಬ್ಬಿನ ಜಲ್ಲೆ ಎಂಬ ಹಾಡನ್ನು ಹೊರತಂದಿದ್ದು, ಇದೀಗ ಆ ಹಾಡು ಎಲ್ಲೆಡೆ ಸದ್ದು ಮಾಡುವ ಮೂಲಕ ಗಮನ ಸೆಳೆದಿದೆ. ಸಾಹಸಮಯ ದೃಶ್ಯಕಾವ್ಯವಾಗಿ, ಪ್ರೇಮಕಥೆಯ ರೂಪಕವಾಗಿ, ನಮ್ಮ ಮಣ್ಣಿನ ಸೊಗಡನ್ನ ಸೂಸುವಂತಹ ಕಥಾಹಂದರವನ್ನು ಚಿತ್ರದ ನಿರ್ಮಾಪಕರೂ ಆದ ಕಾಡ ನಟರಾಜ್ ಅವರು ಈ ಚಿತ್ರಕ್ಕಾಗೇ ಹೆಣೆದಿದ್ದಾರೆ, ಒಂದು ರಿವೆಂಜ್ ಸ್ಟೋರಿ ಎನ್ನಬಹುದಾದ ಈ ಚಿತ್ರದ ತಾರಾಗಣ ಮತ್ತು ತಾಂತ್ರಿಕತೆ ಗಮನ ಸೆಳೆಯುತ್ತಿದೆ.

ಕಾಡ ನಟರಾಜ್ ಅವರೇ ಚಿತ್ರದ ನಾಯಕನಾಗಿ ಅಭಿನಯಿಸಿರುವ ಈ ಸಿನಿಮಾದಲ್ಲಿ ಬಲ ರಾಜವಾಡಿ, ಯಶ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿದ್ದು, ತುಳು ಚಿತ್ರರಂಗದ ಚೆಲುವೆ ನಿರೀಕ್ಷಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮಂಜುಸ್ವಾಮಿ, ಗೋವಿಂದಗೌಡ, ದಿವಾಕರ್, ಕಾಮಿಡಿ ಕಿಲಾಡಿ ಸೂರ್ಯ, ದಿ.ರಾಕೇಶ್ ಪೂಜಾರಿ, ವಿಜಯ್ ಚಂಡೂರು, ಚಂದ್ರಪ್ರಭ, ಕರಿಸುಬ್ಬು, ಗಿರಿ, ಮಾಸ್ಟರ್ ಆರ್ಯನ್, ಬಾಲನಟಿ ರಿದ್ಧಿ ನಟಿಸಿದ್ದಾರೆ. ರಿದ್ಧಿ ಎಂಟರ್‌ಟೈನ್ಮೆಂಟ್ಸ್ ಬ್ಯಾನರ್‌ಅಡಿ ಕಾಡ ನಟರಾಜ್ ಅವರ ಪತ್ನಿ ದೀಪ್ತಿ ದಾಮೋದರ ಅವರು ಪತಿಯ ಕನಸಿಗೆ ಸಾಥ್ ನೀಡಿದ್ದಾರೆ. ಸ್ನೇಹಿತರಾದ ರವಿಕುಮಾರ್ ಎಸ್.ಆರ್. ಸಹ ನಿರ್ಮಾಪಕರಾಗಿದ್ದಾರೆ.

ಕರಿಕಾಡ ಚಿತ್ರವನ್ನ ಗಿಲ್ಲಿ ವೆಂಕಟೇಶ್ ಅವರು ನಿರ್ದೇಶಿಸಿದ್ದು, ಚಿತ್ರಕ್ಕೆ ಅತಿಶಯ್ ಜೈನ್ ಹಾಗೂ ಶಶಾಂಕ್ ಶೇಷಾಗಿರಿ ಅವರ ಸಂಗೀತವಿದೆ. ಶಶಾಂಕ್ ಶೇಷಗಿರಿ ಅವರು ರಾಗ ಸಂಯೋಜನೆಯ ಜತೆಗೆ ಹಿನ್ನಲೆ ಸಂಗೀತವನ್ನು ಒದಗಿಸಿದ್ದಾರೆ. ಕ್ಯಾಮರಾ ಸಾರಥಿಯಾಗಿ ಜೀವನ್ ಗೌಡ ಕೆಲಸ ಮಾಡಿದರುವ ಈ ಚಿತ್ರಕ್ಕೆ ದೀಪಕ್ ಸಿ.ಎಸ್. ಅವರ ಸಂಕಲನವಿದೆ.

ಅಪ್ಪಟ ಕನ್ನಡಿಗರೇ ಸೇರಿ ಮಾಡಿರುವ ಕರಿಕಾಡ ಕನ್ನಡ ಚಿತ್ರವನ್ನ ನೋಡಿ ಮೆಚ್ಚಿಕೊಂಡ ಬಾಲಿವುಡ್ ಫಿಲಂ ಟ್ರೇಡರ್ಸ್ ಈ ಚಿತ್ರವನ್ನು ಹಿಂದಿ ಭಾಷೆಯಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಅಲ್ಲದೆ ಕನ್ನಡ ಸಿನಿಮಾವೊಂದಕ್ಕೆ ಇಷ್ಟೊಂದು ಬ್ರ‍್ಯಾಂಡ್‌ಗಳು ಸಾಥ್ ನೀಡಿರುವುದೂ ಸಹ ಇದೇ ಮೊದಲಾಗಿದ್ದು, ಮಾರ್ಕೆಟಿಂಗ್ ವಿಚಾರದಲ್ಲಿ ಕರಿಕಾಡ ಸಿನಿಮಾ ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ. ನಿರೀಕ್ಷೆ ಹುಟ್ಟಿಸಿದ ಹೊಸ ನಾಯಕ ಕಾಡ ನಟರಾಜ್ ಅವರ ನಟನೆಯ ಕರಿಕಾಡ ಚಿತ್ರವು 6 ಫೆಬ್ರವರಿ 2026ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

Leave a Reply

Your email address will not be published. Required fields are marked *