1
1
ಮೊದಲಬಾರಿಗೆ ತ್ರಿವಳಿ ಸ್ಟಾರ್ಗಳ ಕಮಾಲ್
ಡಾ.ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹು ನಿರೀಕ್ಷಿತ ಚಿತ್ರ 45 ಬಿಡುಗಡೆಗೆ ಒಂದೇದಿನ ಬಾಕಿಯಿದೆ. ಇತ್ತೀಚೆಗೆ ರಿಲೀಸಾಗಿದ್ದ ಚಿತ್ರದ ಟ್ರೈಲರ್ ಭಾರೀ ಸಂಚಲನ ಮೂಡಿಸಿದ್ದು, ಕೆಲವೇ ಗಂಟೆಗಳಲ್ಲಿ 30 ಮಿಲಿಯನ್ ಹಿಟ್ಸ್ ದಾಖಲಿಸುವ ಮೂಲಕ ಪ್ರೇಕ್ಷಕರಲ್ಲಿ ಸಿನಿಮಾ ಮೇಲಿನ ಕ್ರೇಜ್ ಎಷ್ಟಿದೆ ಎಂಬುದನ್ನು ತೋರಿಸಿಕೊಟ್ಟಿದೆ.
ಈ ಕ್ರೇಜ್ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ, ವಿದೇಶಗಳಲ್ಲೂ ಸಹ 45 ಚಿತ್ರದ ಅಬ್ಬರ ಜೋರಾಗಿದೆ. ಡಿಸೆಂಬರ್ 25ರಂದು ಕರ್ನಾಟಕಾದ್ಯಂತ ಈ ಚಿತ್ರ ಬಿಡುಗಡೆಯಾಗಲಿದ್ದು, ಕೆನಡಾದಲ್ಲಿ ಪ್ರೀಮಿಯರ್ ಶೋ ನಡೆದಿದೆ. ಕಳೆದ ವಾರವೇ ಕೆನಡಾದ ಪ್ರೀಮಿಯರ್ ಶೋಗಳಿಗೆ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಿದ್ದು, ಕೆಲವೇ ಗಂಟೆಗಳಲ್ಲಿ ಎಲ್ಲಾ ಟಿಕೆಟ್‌ಗಳು ಸೋಲ್ಡïಔಟ್ ಆಗಿರುವುದು ಚಿತ್ರದ ಮೇಲಿನ ನಿರೀಕ್ಷೆಗೆ ಸಾಕ್ಷಿಯಾಗಿದೆ.

ಇನ್ನು ಕರ್ನಾಟಕದಲ್ಲೂ 45 ಚಿತ್ರದ ಪ್ರೀಮಿಯರ್ ಶೋ ನೋಡಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ, ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿದೆ. ಈಗಾಗಲೇ ಚಿತ್ರದ ಟ್ರೈಲರ್‌ಗೆ ಸಿಕ್ಕಿರುವ ಸ್ಪಂದನೆ ನೋಡಿದರೆ, ರಾಜ್ಯದಲ್ಲೂ ೪೫ ಚಿತ್ರ ಉತ್ತಮ ಓಪನಿಂಗ್ ಪಡೆಯುವ ನಿರೀಕ್ಷೆಯಿದೆ.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದ್ದು, ಬಿಗ್ ಬಜೆಟ್‌ನಲ್ಲಿ ನಿರ್ಮಾಣವಾಗಿದೆ. ಸೂರಜ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಶ್ರೀಮತಿ ಉಮಾ ರಮೇಶ್ ರೆಡ್ಡಿ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಡಿಸೆಂಬರ್ 25ರಂದು ಕನ್ನಡ ಭಾಷೆಯಲ್ಲಿ 45 ತೆರೆಕಾಣಲಿದ್ದು, ವಾರದ ಬಳಿಕ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳ ಡಬ್ಬಿಂಗ್ ಆವೃತ್ತಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
ಚಿತ್ರದ ಕುರಿತಂತೆ ಮಾತನಾಡಿದ ನಿರ್ಮಾಪಕ ರಮೇಶ್ ರೆಡ್ಡಿ, ನಮ್ಮ ಚಿತ್ರಕ್ಕೆ ನಿರೀಕ್ಷೆಗೂ ಮೀರಿ ಜನರಿಂದ ಸ್ಪಂದನೆ ಬರುತ್ತಿದೆ. ಅರ್ಜುನ್ ಜನ್ಯ ಅವರ ನಿರ್ದೇಶನ, ಶಿವಣ್ಣ ಅವರ ವಿಭಿನ್ನ ಲುಕ್, ಉಪ್ಪಿ ಅವರ ಡೈಲಾಗ್ ಡಿಲವರಿ ಹಾಗೂ ರಾಜ್ ಬಿ. ಶೆಟ್ಟಿಯ ಮುಗ್ಧತೆ ಪ್ರೇಕ್ಷಕರ ಮನ ಗೆದ್ದಿದೆ. ಸಿನಿಮಾ ರಿಲೀಸಾದ ಮೇಲೂ ಇದೇರೀತಿಯ ಬೆಂಬಲ ಸಿಗುತ್ತದೆ ಎಂಬ ನಂಬಿಕೆಯಿದೆ ಎಂದು ಹೇಳಿದ್ದಾರೆ.
ಇನ್ನು ನಿರ್ದೇಶಕ ಅರ್ಜುನ್ ಜನ್ಯ, “ಚಿತ್ರದಲ್ಲಿನ ಮೂರೂ ಪಾತ್ರಗಳಿಗೂ ಅದರದೇ ಆದ ವಿಶೇಷತೆಯಿದೆ. ಒಂದು ಭಾಗದಲ್ಲಿ ಬಂದು ಹೋಗುವ ಶಿವಣ್ಣ ಅವರ ಲೇಡಿ ಗೆಟಪ್ ಅಂತೂ ತುಂಬಾ ವಿಶೇಷವಾಗಿದೆ. ಸಿನಿಮಾ ಎಲ್ಲರಿಗೂ ರೀಚ್ ಆಗುತ್ತೆ ಎಂಬ ವಿಶ್ವಾಸವಿದೆ. ಚಿತ್ರ ನೋಡಿ ಹೊರಬಂದ ಮೇಲೆ ಪ್ರೇಕ್ಷಕರು ಚರ್ಚೆ ಮಾಡುವಂಥ ವಿಷಯ 45 ಚಿತ್ರದಲ್ಲಿದೆ. ಇದು ಖಂಡಿತ ಜನರ ಮನ ಗೆಲ್ಲುತ್ತೆ ಎಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.