1
1
ಈ ಹಿಂದೆ ಶುಕ್ರ, ಮಾತರಾಣಿ ಮೌನಮಿಡಿ ಮತ್ತು ಎ ಮಾಸ್ಟರ್‌ಪೀಸ್ ನಂಥ ವಿಭಿನ್ನ ಚಿತ್ರಗಳ ಮೂಲಕ ಸಿನಿಪ್ರೇಮಿಗಳನ್ನು ರಂಜಸಿರುವ ನಿರ್ದೇಶಕ ಪೂರ್ವಜ್, ಇದೀಗ ಮತ್ತೊಂದು ಸಂವೇದನಾಶೀಲ ಹಾಗೂ ವಿಭಿನ್ನ ಪ್ರಯತ್ನದೊಂದಿಗೆ ಮರಳಿದ್ದಾರೆ. ಸೈಂಟಿಫಿಕ್, ಆಕ್ಷನ್ ಥ್ರಿಲ್ಲರ್ ಕಥಾಹಂದರ ಇರುವ ಆ ಚಿತ್ರದ ಹೆಸರು “ಕಿಲ್ಲರ್”.
ಮಾನವೀಯ ಭಾವನೆಗಳು ಮತ್ತು ಕೃತಕ ಬುದ್ಧಿಮತ್ತೆ (AI) ಒಂದಾಗುವ ಈ ಸಿನಿಮಾ ಪ್ರೀತಿ, ಸೇಡು ಮತ್ತು ವೈಜ್ಞಾನಿಕ ದೃಷ್ಠಿಕೋನವನ್ನು ಒಳಗೊಂಡ ಹೊಸ ಯುಗದ ಕಥೆಯನ್ನು ಹೇಳಲಿದೆ. ಪೂರ್ವಜ್ ಅವರ ಕಥೆ, ಚಿತ್ರಕಥೆ, ಸಂಕಲನ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಪೂರ್ವಜ್ ಅವರೇ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಜ್ಯೋತಿ ಪೂರ್ವಜ್ ನಾಯಕಿಯಾಗಿ ಅಭಿನಯಿಸಿದ್ದಾರೆ. ವಿಶಾಲ್ ರಾಜ್ ಮತ್ತು ಗೌತಮ್ ಚಕ್ರಧರ ಕೊಪ್ಪಿಸೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರವನ್ನು ಥಿಂಕ್ ಸಿನಿಮಾ ಬ್ಯಾನರ್ ಅಡಿಯಲ್ಲಿ, AU & I ಸ್ಟುಡಿಯೋಸ್ ಮತ್ತು ಮರ್ಜಿ XR ಸಹಯೋಗದೊಂದಿಗೆ, ಜ್ಯೋತಿ ಪೂರ್ವಜ್, ಪ್ರಜಯ್ ಕಾಮತ್, ಮತ್ತು ಎ. ಪದ್ಮನಾಭ ರೆಡ್ಡಿ ಅವರುಗಳು ನಿರ್ಮಿಸಿದ್ದಾರೆ.
“ಕಿಲ್ಲರ್ – ಭಾಗ 1: ಡ್ರೀಮ್ ಗರ್ಲ್” ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಪ್ರಸ್ತುತ ಚಿತ್ರದ ಪ್ಯಾಚ್‌ವರ್ಕ್ ನಡೆಯುತ್ತಿದೆ.
ಶೀಘ್ರದಲ್ಲೇ ಚಿತ್ರದ ಟೀಸರ್ , ಟ್ರೈಲರ್ ರಿಲೀಸ್ ಮಾಡೋ ಮೂಲಕ ಪ್ರೊಮೋಷನ್ ನಡೆಸಿ, ಆದಷ್ಟು ಬೇಗನೇ ಚಿತ್ರವನ್ನು ತೆರೆಗೆ ತರುವ ಪ್ಲಾನ್ ನಡೆಯುತ್ತಿದೆ.
ಪ್ರೀತಿ, ಪ್ರಣಯ, ಸೇಡು ಮತ್ತು ಕೃತಕ ಬುದ್ಧಿಮತ್ತೆ (AI)ಯ ಸಮ್ಮಿಶ್ರಣವಾಗಿ ಮೂಡಿಬಂದಿರುವ “ಕಿಲ್ಲರ್” ಚಿತ್ರವು ಭಾವನೆಗಳ ಮತ್ತು ತಂತ್ರಜ್ಞಾನದ ನಡುವೆ ನಡೆಯುವ ಭಯಾನಕ ಪಯಣವನ್ನು ವಿವರಿಸುತ್ತದೆ. ಮಾನವನ ಮನಸ್ಸಿನ ಅಸ್ತಿತ್ವ ಮತ್ತು ಯಂತ್ರದ ಚಿಂತನೆಯ ನಡುವೆ ನಡೆಯುವ ಹೋರಾಟವೇ ಈ ಕಥೆಯ ಹೃದಯಭಾಗ.
ಚಂದ್ರಕಾಂತ್ ಕೊಲ್ಲು, ವಿಶಾಲರಾಜ್, ಅರ್ಚನಾ ಅನಂತ್, ರವಿಪ್ರಕಾಶ್ ,ಶಿವಾನಿ ರೆಡ್ಡಿ, ಅಜಯಕುಮಾರ್, ವೆಂಕಟೇಶ್ ಸಾಯಿ, Inabathina Dasaradha, ಗೌತಂ ಚಂದ್ರಕಾಂತ್, ರಮೇಶ್ ರೆಡ್ಡಿ ಪ್ರಮುಖ ತಾರಾಗಣದಲ್ಲಿದ್ದಾರೆ.
ಜಗದೀಶ್ ಬೊಮ್ಮಿಸೆಟ್ಟಿ ಅವರ ಛಾಯಾಗ್ರಹಣ, ಆಶೀರ್ವಾದ್ ಹಾಗೂ ಸುಮನ್ ಜೀವಾ ಅವರ ಸಂಗೀತ ಸಂಯೋಜನೆ, ಬಿ.ಮನೋಜ್ ಕುಮಾರ್ ಅವರ ಸಂಕಲನ,ಮಣಿ ಅವರ ಕಲಾನಿರ್ದೇಶನ, ರಾಜ್ ಕುಮಾರ್ ಗಂಗಾಪುತ್ರ ಅವರ ಆಕ್ಷನ್ ಕೊರಿಯಾಗ್ರಫಿ, ಪೂರ್ವಾಜ್, ಜಗದೀಶ್ ಬೊಮ್ಮಿಸೆಟ್ಟಿ ಅವರ ಪ್ರೊಡಕ್ಷನ್ ಡಿಸೈನ್, ಎ.ಸತೀಶ್ ಕುಮಾರ್ ಅವರ ಸೌಂಡ್ ಡಿಸೈನ್, ಉದಯಶ್ರೀ ಪೂರ್ವಾಜ್ ಅವರ ಕಾಸ್ಟೂಮ್ ಡಿಸೈನ್ ಈ ಚಿತ್ರಕ್ಕಿದೆ.
ಚಿತ್ರದ ಲೈನ್ ಪ್ರೊಡ್ಯೂಸರ್ ಆಗಿ ದಶರಥ ಮಾಧವ, ಸೀತಾರಾಮರಾವ್, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಡಿಎಸ್ ಬಾಷಾ ಕಾರ್ಯನಿರ್ವಹಿಸಿದ್ದಾರೆ.