1
1
ಇಂದು ಮ,12-45ಕ್ಕೆ ಇಡೀಭಾರತೀಯ ಚಿತ್ರೋದ್ಯಮವೇ ಕಾತುರದಿಂದ ಕಾಯುತ್ತಿದ್ದ ‘ಕಾಂತಾರ ಅಧ್ಯಾಯ 1’ ಚಿತ್ರದ
ಕನ್ನಡ ಭಾಷೆಯ ಟ್ರೈಲರ್ ಚಿತ್ರ ಪ್ರೇಮಿಗಳಿಂದಲೇ ಬಿಡುಗಡೆಯಾಯಿತು. ಹೃತಿಕ್ ರೋಷನ್, ಶಿವಕಾರ್ತಿಕೇಯನ್, ಪೃಥ್ವಿರಾಜ್ ಸುಕುಮಾರನ್, ಪ್ರಭಾಸ್ ಅವರಿಂದ ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಯ ಟ್ರೇಲರ್ ಬಿಡುಗಡೆಯಾಯಿತು.
ಆರಂಭದಿಂದಲೂ ಸಾಕಷ್ಟು ಕುತೂಹಲ, ಕಾತುರ ಮೂಡಿಸಿರುವ, ಹೊಂಬಾಳೆ ಫಿಲಂಸ್ ನಿರ್ಮಾಣ ಹಾಗೂ ರಿಷಬ್ ಶೆಟ್ಟಿ ಅವರ ನಟನೆ ಹಾಗೂ ನಿರ್ದೇಶನದ, ವಿಶ್ವವೇ ಎದುರು ನೋಡುತ್ತಿರುವ, ಬಹು ನಿರೀಕ್ಷಿತ “ಕಾಂತಾರ ಅಧ್ಯಾಯ 1” ಚಿತ್ರವು ಸಪ್ತ ಭಾಷೆಗಳಲ್ಲಿ ಅಕ್ಟೋಬರ್ 2 ರಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮುನ್ನ ಸೆ.22ರ ಸೋಮವಾರ ಮಧ್ಯಾಹ್ನ 12:45ಕ್ಕೆ ಹಿಂದಿ ಭಾಷೆಯ ಟ್ರೇಲರ್ ಅನ್ನು ಹೃತಿಕ್ ರೋಶನ್, ತಮಿಳು ಭಾಷೆಯ ಟ್ರೇಲರ್ ಅನ್ನು ಶಿವಕಾರ್ತಿಕೇಯನ್, ಮಲಯಾಳಂ ಟ್ರೇಲರ್ ಅನ್ನು ಪೃಥ್ವಿರಾಜ್ ಸುಕುಮಾರನ್ ಹಾಗೂ ತೆಲುಗು ಭಾಷೆಯ ಟ್ರೇಲರ್ ಅನ್ನು ಪ್ರಭಾಸ್ ಅವರುಗಳು ಹೊಂಬಾಳೆ ಫಿಲಂಸ್ ಯುಟ್ಯೂಬ್ ಚಾನೆಲ್ ಮೂಲಕ ಬಿಡುಗಡೆ ಮಾಡಿದರು. ಕಾಂತಾರ
ಕನ್ನಡದ ಕಲಾಭಿಮಾಗಳಿಂದಲೇ ಕನ್ನಡದ “ಕಾಂತಾರ 1” ಚಿತ್ರದ ಟ್ರೇಲರ್ ಬಿಡುಗಡೆಯಾಗಿರುವುದು ವಿಶೇಷ.

ಚಿತ್ರದ ಬಿಡುಗಡೆಗೆ ಕೆಲವೇ ದಿನಗಳು ಬಾಕಿಯಿದ್ದು, ಈಗಾಗಲೇ ರಿಲೀಸಾಗಿರುವ ಚಿತ್ರದ ಮೇಕಿಂಗ್ ವಿಡಿಯೋ, ಪೋಸ್ಟರ್ ಸಾಕಷ್ಟು ಕುತೂಹಲ ಹುಟ್ಟುಹಾಕಿದ್ದು, ಅಭಿಮಾನಿಗಳು ಅ.2ರಂದು ಕಾಂತಾರ-1 ವೈಭವವನ್ನು ಬೆಳ್ಳಿತೆರೆಯ ಮೇಲೆ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ.
ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ, ಅರವಿಂದ್ ಎಸ್. ಕಶ್ಯಪ್ ಅವ ಛಾಯಾಗ್ರಹಣ ಹಾಗೂ ಪ್ರಗತಿ ಶೆಟ್ಟಿ ಅವರ ವಸ್ತ್ರ ವಿನ್ಯಾಸ “ಕಾಂತಾರ-1 ಚಿತ್ರಕ್ಕಿದೆ.
ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಸೇರಿದಂತೆ ಕರಾವಳಿ ಭಾಗದ ಹಲವಾರು ಪ್ರತಿಭೆಗಳು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
‘ಕಾಂತಾರ ಅಧ್ಯಾಯ 1. ಕಲೆ, ಭಕ್ತಿ ಮತ್ತು ಶಕ್ತಿಯ ಮಹತ್ವವನ್ನು ಒಳಗೊಂಡ ಚಿತ್ರವಾಗಿದ್ದು, ಸದಭಿರುಚಿಯ ಚಿತ್ರಗಳನ್ನೇ ನಿರ್ಮಾಣ ಮಾಡುತ್ತಾ ಬಂದಿರುವ ಹೊಂಬಾಳೆ ಫಿಲಂಸ್ ನಿಂದ ಮತ್ತೊಂದು ಅದ್ಭುತ ಕಲಾಕೃತಿ ಸಿನಿರಸಿಕರಿಗೆ ಕೊಡುಗೆಯಾಗಿ ಸಿಗಲಿದೆ.