1
1
ಸಹಸ್ರಾರು ಭಕ್ತಿಗೀತೆಗಳನ್ನು ಭಕ್ತಿ ಭಾವ ಪರವಶತೆಯಿಂದ ಹಾಡುವ ಮೂಲಕ ದೇಶ ವಿದೇಶಗಳಲ್ಲಿ ಹೆಸರು ಗಳಿಸಿರುವ, ಅದ್ಭಿತ ಕಂಠದ ಗಾಯಕರಾದ ವಿದ್ಯಾಭೂಷಣರು ಸಾಹಿತ್ಯ ಅಕಾಡೆಮಿ ಪುರಸ್ಕ್ರತ ಸಾಹಿತಿ-ನಿರ್ದೇಶಕ ಸುಧೀರ್ ಅತ್ತಾವರ್ ಅವರ ರಚನೆಯ “ಆದಿ ಮಹಾಶಕ್ತಿ ಮಹಾಮಾಯಿಯೇ…” ಎಂಬ ಸಾಹಿತ್ಯ ಇರುವ ಹಾಡನ್ನು ಪ್ರಪ್ರಥಮ ಬಾರಿಗೆ ಪಿದಾಯಿ ಚಿತ್ರಕ್ಕಾಗಿ ಹಾಡಿದ್ದಾರೆ.

ಕನಕದಾಸರು, ಪುರಂದರದಾಸರು ತ್ಯಾಗರಾಜರು…ಇಂತಹ ದಾಸ ಶ್ರೇಷ್ಠರ, ಋಷಿ-ಮುನಿಗಳ ಸಹಸ್ರಾರು ಭಕ್ತಿಗೀತೆಗಳನ್ನು ಹಾಡಿರುವ ವಿದ್ಯಾಭೂಷಣ್ ಅವರು ಸುಧೀರ್ ರಚನೆಯ ಭಕ್ತಿ ಸಾಹಿತ್ಯವನ್ನು ಮೆಚ್ಚಿ ಹಾಡಿರುವುದು ಧನ್ಯತಾಭಾವ ಮೂಡಿಸಿದೆ ಎಂದು ಗೀತೆರಚನೆಕಾರ ಸುಧೀರ್ ಅತ್ತಾವರ್ ತಿಳಿಸಿರುತ್ತಾರೆ.
“ಮಹಾಮಯಿ” ಯಶೋದೆಯ ಮಗಳು. ಕೃಷ್ಣ ನನ್ನು ಉಳಿಸಲು ಕಂಸನಿಂದ ಶಿರಚ್ಛೇದಕ್ಕೊಳಗಾಗಿ, ಕೃಷ್ಣನನ್ನು ರಕ್ಷಿಸುವ ಪ್ರಸಂಗ ಇರುವ ಈ ಹಾಡಿನಲ್ಲಿ “ಮಹಾಮಯಿ”ಯ ವರ್ಣನೆಯ ಸಾಹಿತ್ಯವಿದ್ದು, ಹಾಡಿನ ಲಿರಿಕಲ್ ಆಡಿಯೋ ಇದೀಗ ಬಿಡುಗಡೆಯಾಗಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ಅವರ ನಿರ್ದೇಶನದ ಪಿದಾಯಿ ಚಿತ್ರವನ್ನು ರಮೇಶ್ ಶೆಟ್ಟಿಗಾರ್ ಅವರು ಕಥೆ ಚಿತ್ರಕಥೆ ಬರೆದು ನಿರ್ಮಿಸಿದ್ದಾರೆ.