Popular Posts

“ರಾಮರಸ” ಚಿತ್ರದ ಪ್ರಮುಖ ಪಾತ್ರದಲ್ಲಿ ಅದಾ ಶರ್ಮ

ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿರುವ, ಕನ್ನಡದ ಬಹು ನಿರೀಕ್ಷಿತ ಚಿತ್ರ ‘ರಾಮರಸ’ ಯಶಸ್ವಿಯಾಗಿ ತನ್ನ ಚಿತ್ರೀಕರಣ ಪೂರ್ಣಗೊಳಿಸಿದ್ದು, ಇದೀಗ ಪೋಸ್ಟ್-ಪ್ರೊಡಕ್ಷನ್ ಹಂತಕ್ಕೆ ಕಾಲಿಟ್ಟಿದೆ.

ಪ್ರೇಕ್ಷಕರು ಚಿತ್ರತಂಡದಿಂದ ಏನನ್ನು ನಿರೀಕ್ಷಿಸುತ್ತಿದ್ದಾರೋ ಅದಕ್ಕಿಂತಲೂ ಮಿಗಿಲಾದ ಒಂದು ವಿಶಿಷ್ಟ ಮತ್ತು ಅದ್ಭುತ ಸಿನಿಮಾ ಅನುಭವವನ್ನು ನೀಡಲು ‘ರಾಮರಸ’ ಸಜ್ಜಾಗುತ್ತಿದೆ. ಈಗಾಗಲೇ ದೊಡ್ಡ ತಾರಾಗಣವನ್ನು ಹೊಂದಿರುವ ಈ ಚಿತ್ರಕ್ಕೆ ಈಗ ಮತ್ತೊಂದು ಬಿಗ್ ಸರ್ಪ್ರೈಸ್ ಸಿಕ್ಕಿದೆ.

ಬಾಲಿವುಡ್ ಹಾಗೂ ದಕ್ಷಿಣ ಭಾರತದ ಖ್ಯಾತ ನಟಿ ಅದಾ ಶರ್ಮಾ ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸುವ ಮೂಲಕ ಬಹಳ ದಿನಗಳ ನಂತರ ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವೈವಿಧ್ಯಮಯ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ನಟಿ ಅದಾ ಶರ್ಮಾ, ಈ ಚಿತ್ರದಲ್ಲಿ ವಿಭಿನ್ನ ಮತ್ತು ಪ್ರಭಾವಶಾಲಿ ಪಾತ್ರ ನಿರ್ವಹಿಸುತ್ತಿವ ಮೂಲಕ ಚಿತ್ರಕ್ಕೆ ಮತ್ತಷ್ಟು ಮೆರುಗು ನೀಡಿದ್ದಾರೆ.

ಇಡೀ ಸೃಷ್ಟಿಯೇ ಪರಾಶಕ್ತಿಯ ಲೀಲೆ. ಹಾಲುಣಿಸುವವಳೂ ತಾಯಿ. ಮಣ್ಣು ಮುಕ್ಕಿಸುವವಳೂ ತಾಯಿ. ಆದರೆ ಹಾಲು ಯಾವುದು, ಮಣ್ಣು ಯಾವುದು ಅನ್ನುವುದರ ಅರಿವು ಪಡೆಯುವುದೇ ಇಡೀ ಬದುಕಿನ ಮಾಯೆ. ದಶ ಮಹಾವಿದ್ಯೆಯ ಸಾರವನ್ನು ಪರಿಚಯಿಸಲು ತಾಯಿ ರಾಮರಸದಲ್ಲಿ ಯಾವ ರೂಪ ತಾಳಿ ಬರಲಿದ್ದಾಳೆ? ಅದನ್ನು ನೋಡಿಯೇ ಸವಿಯಬೇಕು.
ರಾಮರಸ ಚಿತ್ರದಲ್ಲಿ ಬಿಗ್ ಬಾಸ್ ವಿಜೇತ ಕಾರ್ತಿಕ್ ಮಹೇಶ್, ಡೈನಮಿಕ್ ಸ್ಟಾರ್ ಪ್ರಜ್ವಲ್ ದೇವರಾಜ್, ಕಾಮಿಡಿ ಕಿಂಗ್ ಶರಣ್ ಮತ್ತು ಹೆಬ್ಬಾ ಪಟೇಲ್ ಸೇರಿದಂತೆ ಬಹುದೊಡ್ಡ ತಾರಾಗಣ ಒಂದೇ ಪರದೆಯ ಮೇಲೆ ಅಬ್ಬರಿಸಲಿದೆ.
ಈ ಚಿತ್ರಕ್ಕೆ ಕೃಷ್ಣ ಕುಮಾರ್ (KK), ಅವರ ಛಾಯಾಗ್ರಹಣ, ಬಿ.ಜೆ. ಭರತ್ ಅವರ
ಸಂಗೀತ ನಿರ್ದೇಶನ, ಅರ್ಜುನ್ ಕಿಟ್ಟು ಅವರ ಸಂಕಲನ, ಡಾ. ನಾಗೇಂದ್ರ ಪ್ರಸಾದ್, ನಾಗಾರ್ಜುನ್ ಶರ್ಮಾ, ಪುನೀತ್ ರಂಗಸ್ವಾಮಿ ಅವರ ಸಾಹಿತ್ಯವಿದೆ, ಚಿತ್ರದ ಕ್ರಿಯೇಟಿವ್ ಹೆಡ್ ಆಗಿ ಗುರು ದೇಶಪಾಂಡೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ಗುರು ದೇಶಪಾಂಡೆ ಮತ್ತು ವಿಕ್ರಂ ಆರ್ಯ ಸೇರಿ ಜಿ ಸಿನಿಮಾಸ್ ಪ್ರೊಡಕ್ಷನ್ (G Cinemas Production), ಸೆವೆನ್ ಸ್ಟಾರ್ ಮೂವೀಸ್ (Seven Star Movies) ಅಸೋಸಿಯೇಷನ್ ನೊಂದಿಗೆ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ.
ಹಲವು ಪ್ರಮುಖ ಪಾತ್ರಗಳು ಹಾಗೂ ಯಾರೂ ಊಹಿಸದ ಸ್ಟಾರ್ ನಟರ ವಿವರಗಳನ್ನು ಸಸ್ಪೆನ್ಸ್ ಆಗಿ ಇಡಲಾಗಿದ್ದು, ಮುಂದಿನ ದಿನಗಳಲ್ಲಿ ಒಂದೊಂದಾಗಿ ಪರಿಚಯಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ. ಚಿತ್ರವನ್ನು ಆದಷ್ಟು ಬೇಗನೇ ಬೆಳ್ಳಿಪರದೆಗೆ ತರುವ ಪ್ರಯತ್ನ ನಡೆಯುತ್ತಿದೆ. ಶೀಘ್ರದಲ್ಲೇ ಚಿತ್ರದ ಟೀಸರ್ ಬಿಡುಗಡೆಯ ದಿನಾಂಕ ಹಾಗೂ ಮುಂದಿನ ಪಾತ್ರಗಳನ್ನು ಚಿತ್ರತಂಡ ಪರಿಚಯಿಸಲಿದೆ.

Leave a Reply

Your email address will not be published. Required fields are marked *